ADVERTISEMENT

ಪರವಾನಗಿ ಇಲ್ಲದೆ ರಸಗೊಬ್ಬರ ಮಾರಾಟ: ವಶ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 14:14 IST
Last Updated 13 ನವೆಂಬರ್ 2024, 14:14 IST
ದೊಡ್ಡಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ರಸಗೊಬ್ಬರವನ್ನು ಅಧಿಕಾರಿಗಳು ವಶಪಡಿಸಿಕೊಂಡರು
ದೊಡ್ಡಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ರಸಗೊಬ್ಬರವನ್ನು ಅಧಿಕಾರಿಗಳು ವಶಪಡಿಸಿಕೊಂಡರು   

ವೈ.ಎನ್.ಹೊಸಕೋಟೆ: ಹೋಬಳಿಯ ದೊಡ್ಡಹಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ಕೀಟನಾಶಕ ಮತ್ತು ರಸಗೊಬ್ಬರವನ್ನು ಮಾರಾಟ ಮಾಡುತ್ತಿದ್ದ ಎಸ್.ಎಲ್.ಎನ್ ಕೀಟನಾಶಕ ಅಂಗಡಿಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಕೀಟನಾಶಕ ವಶಪಡಿಸಿಕೊಂಡಿದ್ದಾರೆ.

ಪರವಾನಗಿ ಇಲ್ಲದೆ ಒಟ್ಟು 780 ಪಾಕೆಟ್‌ನ 460 ಕೆಜಿ/ಲೀಟರ್ ಪ್ರಮಾಣದ ವಿವಿಧ ಲಘು ಪೋಷಕಾಂಶ ಮತ್ತು ಜೈವಿಕ ಪ್ರಚೋದಕ, ಸಸ್ಯವರ್ಧಕ ಗೊಬ್ಬರಗಳನ್ನು ವಿನುಂತ ಆಗ್ರೋಟೆಕ್ ಬಳ್ಳಾರಿ ಮತ್ತು ಐಸಿಎಂ ಲೈಪ್ ಸೈನ್ಸ್ ಹೈದರಾಬಾದ್ ಅವರಿಂದ ಪಡೆದು ಅಂಗಡಿಯವರು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಬಗ್ಗೆ ದೂರು ಬಂದಿತ್ತು. ಅದರನ್ವಯ ದಾಳಿ ನಡೆಸಿದಾಗ ₹4.5 ಲಕ್ಷ ಮೌಲ್ಯದ ದಾಸ್ತಾನು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾರಾಟಗಾರರ ಮತ್ತು ಸರಬರಾಜುದಾರರ ನಿಯಂತ್ರಣ ಆದೇಶ 1985 ಮತ್ತು ಅಗತ್ಯ ವಸ್ತುಗಳ ಅಧಿನಿಯಮ 1955ರ ಉಲ್ಲಂಘನೆಯಡಿ ಅಂಗಡಿಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ (ಜಾರಿದಳ) ಪುಟ್ಟರಂಗಯ್ಯ ಮತ್ತು ವೈ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.