ADVERTISEMENT

ತಿಪಟೂರು: 13-14ರಂದು ಹಲಸಿನ ಹಬ್ಬ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 16:07 IST
Last Updated 9 ಜುಲೈ 2024, 16:07 IST
   

ತಿಪಟೂರು: ನಗರದ ಸತ್ಯಗಣಪತಿ ಅಮೃತ ಮಹೋತ್ಸವ ಭವನದಲ್ಲಿ ಜುಲೈ 13 ಹಾಗೂ 14ರಂದು ಬೆಳಿಗ್ಗೆ 9ರಿಂದ ರಾತ್ರಿ 9ರ ವರೆಗೆ ಹಲಸಿನ ಹಬ್ಬ ಆಚರಿಸಲಾಗುವುದು ಎಂದು ಸಂಸ್ಥೆ ಅಧ್ಯಕ್ಷ ಗುರು ಸಿರಿಗಂಧ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯಗಣಪತಿ ಸೇವಾ ಸಂಘ ಟ್ರಸ್ಟ್, ಸೊಗಡು ಜನಪದ ಹೆಜ್ಜೆ ಮತ್ತು ಹಲವು ಸಂಘ-ಸಂಸ್ಥೆಗಳಿಂದ ಹಲಸಿನ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ, ಹಲಸಿನ ಖಾದ್ಯ ತಯಾರಿ, ನಾ ಕಂಡ ಹಲಸು- ಮಕ್ಕಳಿಗೆ ಚಿತ್ರ ಕಲಾ ಸ್ಪರ್ಧೆ, ತೂಕದ ಹಲಸಿನ ಪ್ರದರ್ಶನ ಹಾಗೂ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಕೆರೆಗೋಡಿ –ರಂಗಾಪುರ ಕ್ಷೇತ್ರದ ಅಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ, ಶಾಸಕ ಕೆ.ಷಡಕ್ಷರಿ, ಮಾಜಿ ಸಚಿವ ಬಿ.ಸಿ. ನಾಗೇಶ್ ಭಾಗವಹಿಸಲಿದ್ದಾರೆ ಎಂದರು.

ADVERTISEMENT

ಗೋಷ್ಠಿಯಲ್ಲಿ ಸೊಗಡು ಜನಪದ ಹೆಜ್ಜೆ ಗೌರವಾಧ್ಯಕ್ಷ ಮುರುಳೀಧರ್, ಕಾರ್ಯದರ್ಶಿ ಚಿದಾನಂದ್, ನಿರ್ದೇಶಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.