ADVERTISEMENT

ಬೆಂಕಿಗೆ ಮನೆ, ತೆಂಗಿನ ಮರ ಭಸ್ಮ

​ಪ್ರಜಾವಾಣಿ ವಾರ್ತೆ
Published 6 ಮೇ 2024, 4:25 IST
Last Updated 6 ಮೇ 2024, 4:25 IST
ತುರುವೇಕೆರೆ ತಾಲ್ಲೂಕು ಥರಮನಕೋಟೆಯಲ್ಲಿ ಸುಟ್ಟುಹೋಗಿರುವ ತೆಂಗಿನಮರಗಳು
ತುರುವೇಕೆರೆ ತಾಲ್ಲೂಕು ಥರಮನಕೋಟೆಯಲ್ಲಿ ಸುಟ್ಟುಹೋಗಿರುವ ತೆಂಗಿನಮರಗಳು   

ತುರುವೇಕೆರೆ: ತಾಲ್ಲೂಕಿನ ಥರಮನಕೋಟೆಯಲ್ಲಿ ಬೆಂಕಿಗೆ ಸಿಲುಕಿ ಸುಮಾರು 200ಕ್ಕೂ ಹೆಚ್ಚು ತೆಂಗಿನ ಸಸಿ, ಮರಗಳು ಹಾಗೂ ಮನೆ ಭಸ್ಮವಾಗಿದೆ.

ಥರಮನಕೋಟೆಯ ಡಿ.ಎಂ.ತಿಮ್ಮಯ್ಯ ಎಂಬುವವರಿಗೆ ಸೇರಿದ ತೆಂಗಿನ ತೋಟಕ್ಕೆ ಬೆಂಕಿ ತಗುಲಿದ ಪರಿಣಾಮ ತೋಟದಲ್ಲಿದ್ದ ತೆಂಗಿನ ಮರ ಹಾಗೂ ಅಲ್ಲೇ ಇದ್ದ ಮನೆ ಭಸ್ಮಗೊಂಡಿದೆ. ಮನೆಯೊಳಗಿದ್ದ ಮರ ಮುಟ್ಟುಗಳು ಹಾಗೂ ಮನೆಯಲ್ಲಿದ್ದ ಧವಸ ಧಾನ್ಯಗಳು ಸೇರಿದಂತೆ ಎಲ್ಲ ವಸ್ತುಗಳು ಭಸ್ಮವಾಗಿದೆ. ತೋಟದ ಬಳಿಯೇ ದಾಸ್ತಾನು ಮಾಡಲಾಗಿದ್ದ ಸುಮಾರು ಮೂರು ಸಾವಿರ ತೆಂಗಿನ ಕಾಯಿಯೂ ಬೆಂಕಿಯ ಕೆನ್ನಾಲಿಗೆಗೆ ಸುಟ್ಟುಹೋಗಿವೆ.

ಈ ಬೆಂಕಿ ಅನಾಹುತ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ಹಾಕಿದ್ದಾರೋ ಎಂಬುದು ತಿಳಿದಿಲ್ಲ ಎಂದು ತೋಟದ ಮಾಲೀಕ ತಿಮ್ಮಯ್ಯ ತಿಳಿಸಿದರು.

ADVERTISEMENT

ಅಗ್ನಿಶಾಮಕ ದಳ ಮತ್ತು ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಮುಂದಾಗಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ. ತುರುವೇಕೆರೆಯ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಅವರಿಗೆ ಮನವಿ ಸಲ್ಲಿಸಿರುವ ತಿಮ್ಮಯ್ಯ ಅಗ್ನಿ ಆಕಸ್ಮಿಕದಿಂದ ಸುಮಾರು ₹6 ಲಕ್ಷ ನಷ್ಟ ಸಂಭವಿಸಿದೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದೂ ವಿನಂತಿಸಿದ್ದಾರೆ.

ತುರುವೇಕೆರೆ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.