ADVERTISEMENT

ಟ್ರಾಕ್ಟರ್ ಮುಗುಚಿ ಬಿದ್ದು ಗಸ್ತು ಅರಣ್ಯ ಪಾಲಕ ಸಾವು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2023, 4:54 IST
Last Updated 10 ಡಿಸೆಂಬರ್ 2023, 4:54 IST
ಮೋಹನ್ ಕುಮಾರ್
ಮೋಹನ್ ಕುಮಾರ್   

ಕುಣಿಗಲ್: ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಕೆಂಪಸಾಗರದಲ್ಲಿ ಶನಿವಾರ ಹೊಲ ಹೂಳುವಾಗ ಟ್ರ್ಯಾಕ್ಟರ್‌ ಮುಗಿಚಿ ಬಿದ್ದು ಗಸ್ತು ಅರಣ್ಯ ಪಾಲಕ ಮೋಹನ್ ಕುಮಾರ್ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಹುಲಿಯೂರುದುರ್ಗ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೋಹನ್ ಕುಮಾರ್ ಅವರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ರಾಜ್ಯ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಇಲಾಖೆಯಿಂದ 2020ರಲ್ಲಿ ಮುಖ್ಯಮಂತ್ರಿ ಪದಕ ಪಡೆದಿದ್ದರು.

ಮೃತರಿಗೆ ಪತ್ನಿ, ಪುತ್ರಿ ಇದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.