ತುಮಕೂರು: ‘ಬಿಜೆಪಿಯಲ್ಲೂ ಪಿತೂರಿ ಮಾಡುವವರು ಇದ್ದಾರೆ. ನಾಲ್ಕು ಜನ ಒಟ್ಟಾಗಿದ್ದರೆ ಅದರಲ್ಲಿ ಪಿತೂರಿ ಮಾಡುವ ಒಬ್ಬರು ಇರುತ್ತಾರೆ’ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸಂಸದ ಜಿ.ಎಸ್.ಬಸವರಾಜು ಹೆಸರು ಹೇಳದೆ ಪರೋಕ್ಷವಾಗಿ ಕುಟುಕಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾಲ್ಕು ಜನ ಒಟ್ಟಾಗಿದ್ದರೆ ಅದರಲ್ಲಿ ಒಬ್ಬ ಪಿತೂರಿದಾರ ಇರುತ್ತಾನೆ. ಅದು ನಮ್ಮ ಸಂಸ್ಕೃತಿಯಲ್ಲೇ ಇದೆ. ಆ ಉದ್ದೇಶದಿಂದ ಹೇಳಿದ್ದೇನೆ’ ಎಂದು ಸಮರ್ಥಿಸಿಕೊಂಡರು.
ಇದಕ್ಕೂ ಮುನ್ನ ಬಿಜೆಪಿ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಗುಂಪಿನಲ್ಲಿ ಸೇರಿಕೊಂಡು ಪಿತೂರಿ ಮಾಡುತ್ತಾರೆ. ಇದನ್ನೆಲ್ಲ ಬಿಟ್ಟು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು’ ಎಂದು ಹೇಳಿದ್ದರು.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ‘ಇಂತಹ ವಿಚಾರಗಳು ನಮ್ಮ ಸಂಸ್ಕೃತಿಯಲ್ಲೇ ಇವೆ. ಆ ಉದ್ದೇಶದಿಂದ ಹೇಳಿದ್ದೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ’ ಎಂದು ಸಮಜಾಯಿಸಿಯನ್ನೂ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.