ADVERTISEMENT

ತುಮಕೂರು: ಸ್ಪ್ರೈಟ್‌ ಬಾಟಲಿಯಲ್ಲಿ ಹುಳು ಪತ್ತೆ!

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 5:47 IST
Last Updated 6 ಜುಲೈ 2024, 5:47 IST
ಸ್ಪ್ರೈಟ್‌ ಬಾಟಲಿಯಲ್ಲಿ ಪತ್ತೆಯಾದ ಹುಳು
ಸ್ಪ್ರೈಟ್‌ ಬಾಟಲಿಯಲ್ಲಿ ಪತ್ತೆಯಾದ ಹುಳು   

ತುಮಕೂರು: ಕೋಕ ಕೋಲ ಕಂಪನಿಯ ತಂಪು ಪಾನೀಯ ಸ್ಪ್ರೈಟ್‌ ಬಾಟಲಿಯಲ್ಲಿ ಹುಳು ಪತ್ತೆಯಾಗಿದೆ.

ನಗರದ ಎಂ.ಜಿ.ರಸ್ತೆಯ ‘ಭಾರತಿ ಟೀ ಸ್ಟಾಲ್‌’ನಲ್ಲಿ ಗುರುವಾರ ಸಂಜೆ ಗ್ರಾಹಕರೊಬ್ಬರು 200 ಎಂ.ಎಲ್‌ ಸ್ಪ್ರೈಟ್‌ ಬಾಟಲಿಯಿಂದ ತಂಪು ಪಾನಿಯ ಕುಡಿಯುವಾಗ ಹುಳು ಪತ್ತೆಯಾಗಿದೆ. ಕೂಡಲೇ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಹುಳು ಪತ್ತೆಯಾದ ಬಾಟಲಿ ಸೇರಿ ಒಟ್ಟು 22 ಸ್ಪ್ರೈಟ್‌ ಬಾಟಲಿಗಳನ್ನು ಜಪ್ತಿ ಮಾಡಿ, ಶುಕ್ರವಾರ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ADVERTISEMENT

ತುಮಕೂರಿನ ವಿತರಕರೊಬ್ಬರು ಟೀ ಸ್ಟಾಲ್‌ಗೆ ತಂಪು ಪಾನೀಯ ಬಾಟಲಿ ಸರಬರಾಜು ಮಾಡಿದ್ದಾರೆ. ಇದನ್ನು ರಾಮನಗರ ತಾಲ್ಲೂಕಿನ ಬಿಡದಿ ಬಳಿ ತಯಾರಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ. ಸ್ಪ್ರೈಟ್‌ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ ವಿತರಕರು ಮತ್ತು ತಯಾರಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

‘ಗ್ರಾಹಕರ ದೂರಿನ ಮೇರೆಗೆ ಸ್ಪ್ರೈಟ್‌ ಬಾಟಲಿ ಮಾದರಿಗಳನ್ನು ಜಪ್ತಿ ಪಡೆಯಲಾಗಿದೆ. ಜುಲೈ 1ರಂದು ಟೀ ಸ್ಟಾಲ್‌ಗೆ ಬಾಟಲಿ ಸರಬರಾಜಾಗಿದೆ. ಇದನ್ನು ಡಿಸೆಂಬರ್‌ ವರೆಗೆ ಉಪಯೋಗಿಸಬಹುದಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರ ಯಾರದು ತಪ್ಪು, ಎಲ್ಲಿ ಎಡವಟ್ಟಾಗಿದೆ ಎಂಬುವುದು ತಿಳಿಯಲಿದೆ. ಟೀ ಸ್ಟಾಲ್‌ ಮಾಲೀಕರಿಗೆ ದಂಡ ವಿಧಿಸಲು ಅವಕಾಶ ಇದೆ’ ಎಂದು ತಾಲ್ಲೂಕು ಆಹಾರ ಸುರಕ್ಷತಾ ಅಧಿಕಾರಿ ನಾರಾಯಣಪ್ಪ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.