ADVERTISEMENT

ತೆಂಗಿನೆಣ್ಣೆ ಘಟಕಕ್ಕೆ ಭೂಮಿಪೂಜೆ

ಕುಣಿಗಲ್‌ ತಾಲ್ಲೂಕಿನ ರೈತರ ಕಂಪನಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 1:36 IST
Last Updated 26 ಜನವರಿ 2021, 1:36 IST
ಕುಣಿಗಲ್ ಪಟ್ಟಣದಲ್ಲಿ ತೆಂಗು ಉತ್ಪಾದಕರ ಕಂಪನಿಯಿಂದ ಕೊಬ್ಬರಿ ಎಣ್ಣೆ ಘಟಕದ ಭೂಮಿಪೂಜೆಯನ್ನು ಕಂಪನಿಯ ಅಧ್ಯಕ್ಷ ನಾರಾಯಣಗೌಡ ನೆರವೇರಿಸಿದರು 
ಕುಣಿಗಲ್ ಪಟ್ಟಣದಲ್ಲಿ ತೆಂಗು ಉತ್ಪಾದಕರ ಕಂಪನಿಯಿಂದ ಕೊಬ್ಬರಿ ಎಣ್ಣೆ ಘಟಕದ ಭೂಮಿಪೂಜೆಯನ್ನು ಕಂಪನಿಯ ಅಧ್ಯಕ್ಷ ನಾರಾಯಣಗೌಡ ನೆರವೇರಿಸಿದರು    

ಕುಣಿಗಲ್: ತೆಂಗು ಉತ್ಪಾದಕರ ಕಂಪನಿಯಿಂದ ವರ್ಜಿನ್ ಕೊಕೊನೆಟ್ ಆಯಿಲ್ ಘಟಕ ಪ್ರಾರಂಭ ಮಾಡುತ್ತಿದ್ದು, ಇದರ ಜೊತೆಗೆ ಇನ್ನಷ್ಟು ಯೋಜನೆಗಳು ರೈತರಿಗೆ ತಲುಪಲಿವೆ ಎಂದು ಕೃಷಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ನಾರಾಯಣ ಗೌಡ ತಿಳಿಸಿದರು.

ಪಟ್ಟಣದ ಬೇಗೂರು ರಸ್ತೆಯ ಎಚ್‌ಪಿ ಗ್ಯಾಸ್ ಬಳಿ ವರ್ಜಿನ್ ಕೊಕೊನೆಟ್ ಆಯಿಲ್ ಘಟಕದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕುಣಿಗಲ್ ತೆಂಗು ಉತ್ಪಾದಕರ ಕಂಪನಿಯು ರೈತರ ಕಂಪನಿಯಾಗಿದೆ. ಇಲ್ಲಿ ಈಗಾಗಲೇ ರೈತರು ಷೇರು ಹೊಂದಿದ್ದಾರೆ. ತೆಂಗಿನ ಮೌಲ್ಯವರ್ಧನೆ ಮಾಡುವ ಉದ್ದೇಶದಿಂದ ಕುಣಿಗಲ್ ತೆಂಗು ಉತ್ಪಾದಕರ ಕಂಪನಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ ಎಂದರು.

ADVERTISEMENT

ಮುಂದಿನ ದಿನಗಳಲ್ಲಿ ರೈತರ ಪ್ರತಿ ತೋಟದಲ್ಲೂ ಜೇನು ಸಾಕಾಣಿಕೆಯನ್ನು ಉಪಕಸುಬಾಗಿ ಅಳವಡಿಸಿಕೊಳ್ಳಲು ಮತ್ತು ತೆಂಗು ಬೆಳೆಯಲ್ಲಿ ಶೇಕಡಾವಾರು ಉತ್ಪಾದನೆ ಹೆಚ್ಚು ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಕಂಪನಿಯ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್, ರೈತ ಭೈರವೇಶ್ವರ ಫೆಡರೇಷನ್ ಅಧ್ಯಕ್ಷ ಆನಂದ್,ನಿರ್ದೇಶಕರಾದ ಎನ್.ಎಸ್. ವಸಂತ್ ಕುಮಾರ್, ಧನಂಜಯ, ಕಂಪನಿಯ ವ್ಯವಸ್ಥಾಪಕಿ ಮಂಜುಳಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.