ADVERTISEMENT

ಈಶ ತಿಪಟೂರು ಎಫ್‌ಪಿಒಗೆ ಕ್ಯಾಪೆಕ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 16:41 IST
Last Updated 10 ನವೆಂಬರ್ 2024, 16:41 IST
ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕ್ಯಾಪೆಕ್) ನೀಡಿದ ಪ್ರಶಸ್ತಿಯನ್ನು ರೋಹಿಣಿ ಸಿಂಧೂರಿ ಅವರಿಂದ ಸ್ವೀಕರಿಸುತ್ತಿರುವ ಈಶ ತಿಪಟೂರು ರೈತ ಉತ್ಪಾದಕರ ಕಂಪನಿ ಪ್ರತಿನಿಧಿಗಳು 
ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕ್ಯಾಪೆಕ್) ನೀಡಿದ ಪ್ರಶಸ್ತಿಯನ್ನು ರೋಹಿಣಿ ಸಿಂಧೂರಿ ಅವರಿಂದ ಸ್ವೀಕರಿಸುತ್ತಿರುವ ಈಶ ತಿಪಟೂರು ರೈತ ಉತ್ಪಾದಕರ ಕಂಪನಿ ಪ್ರತಿನಿಧಿಗಳು    

ಬೆಂಗಳೂರು: ಈಶದ ತಿಪಟೂರು ರೈತ ಉತ್ಪಾದಕರ ಕಂಪನಿಗೆ(ಎಫ್‌ಪಿಸಿಎಲ್) ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕ್ಯಾಪೆಕ್) ಭಾನುವಾರ ಪ್ರಶಸ್ತಿ ನೀಡಿ ಗೌರವಿಸಿದೆ. 

ಬೆಂಗಳೂರಿನಲ್ಲಿ ನಡೆದ ಖರೀದಿದಾರ-ಮಾರಾಟಗಾರರ ಸಭೆಯಲ್ಲಿ ರೋಹಿಣಿ ಸಿಂಧೂರಿ ಮತ್ತು ಕ್ಯಾಪೆಕ್ ಕಾರ್ಯದರ್ಶಿ ಬಿ.ಎಚ್. ಹರೀಶ್  ಪ್ರಶಸ್ತಿ ಪ್ರದಾನ ಮಾಡಿದರು.

ಗುಣಮಟ್ಟದ ಉತ್ಪನ್ನಗಳ ಮೂಲಕ ಮಾರುಕಟ್ಟೆ ಪ್ರವೇಶಿಸಿದ ಕಂಪನಿಯು ರೈತರ ಸಬಲೀಕರಣದ ಬದ್ಧತೆಯ ಪ್ರತೀಕ ಎಂದು ಈಶ ಔಟ್‌ ರೀಚ್‌ ಸಂಯೋಜಕ ವೆಂಕಟ ರಾಸಾ ಹೇಳಿದರು. 

ADVERTISEMENT

ಈಶ ಔಟ್‌ ರೀಚ್‌ನ ತಿಪಟೂರು ರೈತ ಉತ್ಪಾದಕರ ಕಂಪನಿ (ಎಫ್‌ಪಿಸಿಎಲ್) 500ಕ್ಕೂ ಹೆಚ್ಚು ಸದಸ್ಯ ರೈತರನ್ನು ಹೊಂದಿದೆ. ರೈತರಿಂದ ನೇರವಾಗಿ ಕೃಷಿ ಉತ್ಪನ್ನ ಖರೀದಿಸಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಲುಪಿಸುತ್ತಿದೆ ಎಂದರು.

ರಾಜ್ಯದ ಮೂರು ಜಿಲ್ಲೆಗಳಲ್ಲಿ ರೈತ ಉತ್ಪಾದಕ ಸಂಘ (ಎಫ್‌ಪಿಒ) ಬೆಳೆಸುತ್ತಿದ್ದು, ರೈತರಿಗೆ ಉತ್ತಮ ಬೆಲೆ, ಮಣ್ಣಿನ ಆರೋಗ್ಯ ಸುಧಾರಣೆ ಮತ್ತು ಮಾರುಕಟ್ಟೆ ಸಾಮರ್ಥ್ಯ ಕಲ್ಪಿಸುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.