ಕುಣಿಗಲ್: ಪಟ್ಟಣದ ಕೆಆರ್ಎಸ್ ಅಗ್ರಹಾರದ ದಯಾನಂದ್ ಅವರ ಮನೆಯಲ್ಲಿ ₹15 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಕಳುವಾಗಿವೆ. ಮೇಕಪ್ ಮಾಡಲು ಬಂದಿದ್ದ ಮಹಿಳೆಯ ಮೇಲೆ ಶಂಕೆ ವ್ಯಕ್ತಪಡಿಸಿ ಶುಕ್ರವಾರ ಕುಣಿಗಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ಭಾನುವಾರ ದಯಾನಂದ್ ಅವರ ಮಗಳ ನಿಶ್ಚಿತಾರ್ಥವಿದ್ದು, ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಬೆಂಗಳೂರಿನ ಯುವತಿಯನ್ನು ಮೇಕಪ್ ಮಾಡಲು ಕರೆಸಿಕೊಂಡಿದ್ದರು.
ಗುರುವಾರ ಕೊಠಡಿಯಲ್ಲಿದ್ದ ಲಾಕರ್ಗಳನ್ನು ನೋಡಿದಾಗ ಒಡವೆ ಕಳುವಾಗಿರುವುದು ಕಂಡು ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.