ತುಮಕೂರು: ಬೆಂಗಳೂರು ನಗರ ತಂಡವು ಭಾನುವಾರ ಮುಕ್ತಾಯವಾದ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು.
ಒಟ್ಟು 45 ಪ್ರಶಸ್ತಿಗಳನ್ನು ಪಡೆದ ಬೆಂಗಳೂರು ನಗರ ತಂಡವು ಪಾರಮ್ಯ ಮೆರೆಯಿತು. 43 ಪ್ರಶಸ್ತಿ ಪಡೆದ ಶಿವಮೊಗ್ಗ ದ್ವಿತೀಯ, 37 ಪ್ರಶಸ್ತಿಗಳೊಂದಿಗೆ ಹಾಸನ ತೃತೀಯ ಸ್ಥಾನ ಪಡೆಯಿತು.
ಮಹಿಳೆಯರ ವಿಭಾಗದ ಕಬಡ್ಡಿ ಫೈನಲ್ ಪಂದ್ಯದಲ್ಲಿ ಬೆಂಗಳೂರು ನಗರ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಬೆಂಗಳೂರು ಗ್ರಾಮಾಂತರ ತಂಡ ರನ್ನರ್ ಅಪ್ ಆಯಿತು. ಪುರುಷರ ವಿಭಾಗದಲ್ಲಿ ಕೊಪ್ಪಳ ತಂಡದ ಆಟಗಾರರು ಫೈನಲ್ ಪಂದ್ಯ ಗೆದ್ದು ಸಂಭ್ರಮಿಸಿದರು. ಬಾಗಲಕೋಟೆ ತಂಡ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಫಲಿತಾಂಶ
ಪುರುಷರು: ಡಿಸ್ಕಸ್ ಥ್ರೋ: 40 ವರ್ಷದ ಒಳಗಿನವರು– ಸಂತೋಷ್ ಗೋಪಾಲ್ ನಾಯ್ಕ್ (ಉತ್ತರ ಕನ್ನಡ)–1, ಎಂ.ಉಮಾಶಂಕರ್ (ಬೆಂಗಳೂರು ಗ್ರಾಮಾಂತರ)–2, ಎ.ಎಂ.ಪ್ರಭಾಕರ್ (ಚಾಮರಾಜನಗರ)–3; 40 ರಿಂದ 50 ವರ್ಷದ ಒಳಗಿನವರು– ಎನ್.ಬಿ.ನಂದೀಶ್‌ಬಾಬು (ವಿಜಯನಗರ)–1, ವೈ.ಜೆ.ರಾಮೇಗೌಡ (ಚಿಕ್ಕಮಗಳೂರು)–2, ಶ್ರೀನಿವಾಸ್ ಎಂ.ಭಟ್ (ಉತ್ತರ ಕನ್ನಡ)–3; 50 ವರ್ಷಕ್ಕಿಂತ ಮೇಲಿನವರು– ಕೃಷ್ಣ ಜಿ.ಗೌಡ (ಉತ್ತರ ಕನ್ನಡ)–1, ಗಣಪತಿ ಜಕಾತಿ (ಮೈಸೂರು)–2, ಬೋರೇಗೌಡ (ಮಂಡ್ಯ)–3; ಭರ್ಜಿ ಎಸೆತ–ಮಣಿಕಂಠನ್ (ದಕ್ಷಿಣ ಕನ್ನಡ)–1, ಎಸ್.ಆರ್.ನಾರಾಯಣಸ್ವಾಮಿ (ಕೋಲಾರ)–2, ನಾಗರಾಜ್ ಬಿ.ಲಮಾಣಿ (ಬೆಳಗಾವಿ)–3; 200 ಮೀಟರ್ ಓಟ– 40 ವರ್ಷದ ಒಳಗಿನವರು– ಸಿ.ಅರುಣ್‌ಕುಮಾರ್ (ಕಲಬುರಗಿ)–1, ಕೆ.ಬಿ.ಶರತ್ (ಚಿಕ್ಕಮಗಳೂರು)–2, ಎಚ್.ಎಲ್.ಚಂದ್ರಶೇಖರ್ (ಚಾಮರಾಜನಗರ)–3; 800 ಮೀಟರ್ ಓಟ: 40 ವರ್ಷದ ಒಳಗಿನವರು– ನಾಗರಾಜು (ಕಲಬುರಗಿ)–1, ಎಚ್.ಎಸ್.ಮಂಜುನಾಥ್( ಬೆಂಗಳೂರು ನಗರ)–2, ವಿನಾಯಕ ಕಲ್ಮನೆ (ಉಡುಪಿ)–3; 40 ರಿಂದ 50 ವರ್ಷ– ಎ.ಎಸ್.ಪ್ರಮೋದ್ (ಹಾಸನ)–1, ಬಿ.ಮೂರ್ತಿ (ಶಿವಮೊಗ್ಗ)–2, ಕೆ.ರಮೇಶ್ (ಕೊಡಗು)–3; 50ರಿಂದ 60 ವರ್ಷ– ಭಾಸ್ಕರ್ ವಿ.ನಾಯ್ಕ್ (ಉತ್ತರ ಕನ್ನಡ)–1, ಪುಟ್ಟಣ್ಣಗೌಡ (ದಾವಣಗೆರೆ)–2, ಎಚ್.ಟಿ.ಥೀಕ್ಷ (ಶಿವಮೊಗ್ಗ)–3;
10000 ಮೀಟರ್– ಎ.ಬಿ.ಚಂಗಪ್ಪ (ಹಾಸನ)–1, ನಿಲವಂಜಿ ನಾಗರಾಜ್ (ವಿಜಯನಗರ)–2, ಪಿ.ಅಭಿಷೇಕ್ (ಬೀದರ್)–3; 400 ಮೀಟರ್ ಹರ್ಡಲ್ಸ್– ಕೆ.ಎಂ.ಯತಿರಾಜು (ಶಿವಮೊಗ್ಗ)–1, ಎಂ.ಪುನೀತ್–2, ಗಿರೀಶ್ ನೀಲಕೊಪ್ಪ (ಹಾವೇರಿ)–3; ಹೈಜಂಪ್: 45 ವರ್ಷದ ಒಳಗಿನವರು– ಎ.ಎಂ.ಪ್ರಭಾಕರ್–1, ಚಂದ್ರಪ್ಪ–2, ರಾಘವೇಂದ್ರ (ತುಮಕೂರು)–3; ವಾಲಿಬಾಲ್: ಕಾರವಾರ–1, ಹಾವೇರಿ–2; ಫುಟ್‌ಬಾಲ್– ಬೀದರ್–1, ಬೆಂಗಳೂರು ನಗರ–2; 4X100 ರಿಲೇ– ಕಲಬುರಗಿ–1, ಶಿವಮೊಗ್ಗ–2, ಹಾವೇರಿ–3. ಮಹಿಳೆಯರ ವಿಭಾಗ– ಹಾಸನ–1, ದಕ್ಷಿಣ ಕನ್ನಡ–2, ಬೆಂಗಳೂರು ನಗರ– 3; ಕುಸ್ತಿ: 57 ಕೆ.ಜಿ– ಯಲ್ಲಾಲಿಂಗಪ್ಪ ಯಾವಗಲ್ (ಬೆಳಗಾವಿ)–1, ದೇವಲನಾಯ್ಕ್ (ಶಿವಮೊಗ್ಗ)–2; 61 ಕೆ.ಜಿ– ಕಿರಣ್ ಆರ್.ನಾಯಕ್ (ಬಾಗಲಕೋಟೆ)–1, ಚಂದ್ರಕಾಂತ್ ತಲವಾಡಿ (ಬೀದರ್)–2; 65 ಕೆ.ಜಿ– ಮರಿಸ್ವಾಮಿ (ಕಲಬುರಗಿ)–1, ಎಸ್.ಅಶೋಕ್ (ಗದಗ)–2; 70 ಕೆ.ಜಿ– ಬಿ.ಎ.ಮುಲ್ಲಾ (ಬೆಳಗಾವಿ)–1; 74 ಕೆ.ಜಿ– ವಿಶ್ವರಾಜ್ (ಕಲಬುರಗಿ)–1, ಟಿ.ಸ್ವಾಮಿ (ಬಳ್ಳಾರಿ)–2; 79 ಕೆ.ಜಿ– ಟಿ.ಬಿ.ಸುರೇಶ್ (ದಾವಣಗೆರೆ)–1, ಶ್ರೀಶೈಲ ಎಸ್.ಕಳಸ (ಹಾವೇರಿ)–2; 86 ಕೆ.ಜಿ– ಉಪೇಂದ್ರ ಕೆರೆಕಲಮತ್ತಿ (ಧಾರವಾಡ)–1, ಎ.ಸಿ.ಬಸವರಾಜ್ (ತುಮಕೂರು)–2; 92 ಕೆ.ಜಿ– ಎನ್.ಮತ್ತೇಶ್ (ಬೆಂಗಳೂರು)–1, ಸುನಿಲ ಬಾಗೇವಾಡಿ (ಬೆಳಗಾವಿ)–2; 97 ಕೆ.ಜಿ– ವಿ.ನವೀನ್ (ಬೆಂಗಳೂರು)–1, ದೇವರಾಜು ಎಂ.ನಾಯಕ (ಹಾವೇರಿ)–2; 125 ಕೆ.ಜಿ– ಎನ್.ಪೃಥ್ವಿರಾಜ್ (ವಿಜಯಪುರ)–1, ಮೊಹ್ಮದ್ ಪಾಷಾ (ಕಲಬುರಗಿ)–2
ಮಹಿಳೆಯರು: ಡಿಸ್ಕಸ್ ಥ್ರೋ: 35 ವರ್ಷದ ಒಳಗಿನವರು– ಪುಷ್ಪಾ–1, ಎನ್.ನಾಗಮಣಿ (ಚಿಕ್ಕಬಳ್ಳಾಪುರ)–2, ರೇಷ್ಮ ನಾಯಕ್ (ಹಾವೇರಿ)–3; 35 ವರ್ಷಕ್ಕಿಂತ ಮೇಲಿನವರು– ಭಾಗೀರಥಿ ರೈ (ದಕ್ಷಿಣ ಕನ್ನಡ)–1, ಡಿ.ಇವಂಜಲಿನಾ (ಬೆಂಗಳೂರು ನಗರ)–2, ಯಮುನಾ ನಾಯ್ಕ್ (ಉತ್ತರ ಕನ್ನಡ)–3; ಜಾವೆಲಿನ್ ಥ್ರೋ – ಸಾವಿತ್ರಿ ಎಸ್.ಮಾದಪ್ಪನವರ್ (ಗದಗ)–1, ಭಾಗೀರಥಿ ರೈ (ದಕ್ಷಿಣ ಕನ್ನಡ)–2, ಕೆ.ವಿ.ರೂಪಾ (ಬೆಂಗಳೂರು ಗ್ರಾಮಾಂತರ)–3.
200 ಮೀಟರ್ ಓಟ: 35 ವರ್ಷದ ಒಳಗಿನವರು– ವೃಂದಾ (ಚಿತ್ರದುರ್ಗ)–1, ರಂಜನಾ ಭಂಡಾರಿ (ಉತ್ತರ ಕನ್ನಡ)–2, ಸಿ.ಜ್ಯೋತಿ–3; 35ರಿಂದ 40 ವರ್ಷ–ಜಿ.ಪಿ.ಕವಿತಾ (ಹಾಸನ)–1, ನಳಿನಿ (ಮೈಸೂರು)–2, ಜಿ.ಎಸ್.ನೇತ್ರಾವತಿ (ಹಾಸನ)–3; 45 ರಿಂದ 60 ವರ್ಷ– ಎಂ.ಎಸ್.ಸರೋಜಾ (ಮೈಸೂರು)–1, ಗೀತಾ (ಉಡುಪಿ)–2, ಕನ್ಯಾಕುಮಾರಿ (ಶಿವಮೊಗ್ಗ)–3 800 ಮೀಟರ್: 35 ವರ್ಷ ಒಳಗಿನವರು– ಎಚ್.ಎಂ.ಜ್ಯೋತಿ (ಶಿವಮೊಗ್ಗ)–1, ಬಿ.ಎನ್.ಹೇಮಲತಾ (ಹಾಸನ)–2, ಕೆ.ಪಿ.ಗುಣವತಿ (ಬೆಂಗಳೂರು ನಗರ)–3;
ಹೈಜಂಪ್: 35 ವರ್ಷ ಒಳಗಿನವರು– ಜೆ.ಭಾರತಿ (ದಕ್ಷಿಣ ಕನ್ನಡ)–1, ಬಿ.ವೃಂದಾ(ಚಿತ್ರದುರ್ಗ)–2, ರೇಖಾ ಅಕ್ಕಿ (ವಿಜಯನಗರ)–3; ಥ್ರೋಬಾಲ್– ಚಿಕ್ಕಬಳ್ಳಾಪುರ–1, ಚಾಮರಾಜನಗರ–2.
ಕುಸ್ತಿ: 50 ಕೆ.ಜಿ– ಬಿ.ಕವಿತಾ (ಚಿತ್ರದುರ್ಗ)–1, ಪದ್ಮಾವತಿ (ಶಿವಮೊಗ್ಗ)–2; 53 ಕೆ.ಜಿ–ಜಿ.ಎಲ್.ನಾಗವೇಣಿ (ತುಮಕೂರು)–1, ರೇಖಾ ಜಿ.ಬಗಲಿ (ಧಾರವಾಡ)–2; 55 ಕೆ.ಜಿ– ಬಿ.ರೇಷ್ಮ (ಕೋಲಾರ)–1, ಸರಸ್ವತಿ ಸುನಯಾ (ಧಾರವಾಡ)–2; 57 ಕೆ.ಜಿ– ಭೂಲಕ್ಷ್ಮಿ (ದಾವಣಗೆರೆ)–1, ಭಾರತಿ ವಿ.ಗಂಗಾವತಿ (ಬಾಗಲಕೋಟೆ)–2; 59 ಕೆ.ಜಿ– ಎಸ್.ಜಿ.ನಿರ್ಮಲಾ (ತುಮಕೂರು)–1, ಎಚ್.ಈರಮ್ಮ (ರಾಯಚೂರು)–2; 62 ಕೆ.ಜಿ– ಬಿ.ಸುಧಾ (ದಾವಣಗೆರೆ)–1, ರೇಣುಕಾ (ಬೀದರ್)–2; 65 ಕೆ.ಜಿ– ಎಂ.ಪಿ.ಗಾಯತ್ರಿ (ದಾವಣಗೆರೆ)–1, ಬಿ.ಆರ್.ಗಾಯತ್ರಮ್ಮ (ಹಾಸನ)–2; 68 ಕೆ.ಜಿ– ಮಂಜಮ್ಮ (ದಾವಣಗೆರೆ)–1, ಬೇಬಿ ಆರ್.ಪಾಟೀಲ್ (ಬಾಗಲಕೋಟೆ)–2; 72 ಕೆ.ಜಿ– ಎ.ಎಸ್.ನರ್ಗೀಸ್ ಬಾನು (ತುಮಕೂರು)–1, ಶಾಂತವ್ವ ಛಲವಾದಿ (ಬಳ್ಳಾರಿ)–2; 76 ಕೆ.ಜಿ– ರೂಪಾ ಬಿ.ಬಸಪ್ಪನವರ್ (ದಾವಣಗೆರೆ)–1, ಕೆ.ಆರ್.ಪರಿಮಳಾ (ಶಿವಮೊಗ್ಗ)–2.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.