ADVERTISEMENT

ತುರುವೇಕೆರೆ: ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 2:28 IST
Last Updated 29 ಅಕ್ಟೋಬರ್ 2024, 2:28 IST
ತುರುವೇಕೆರೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಪ್ರೌಢಶಾಲಾ ವಿಭಾಗದಿಂದ ಅಂಚೀಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಂ.ಬಿ.ಲೋಕೇಶ್ ವಿಜೇತರಾದರು
ತುರುವೇಕೆರೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಪ್ರೌಢಶಾಲಾ ವಿಭಾಗದಿಂದ ಅಂಚೀಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಂ.ಬಿ.ಲೋಕೇಶ್ ವಿಜೇತರಾದರು   

ತುರುವೇಕೆರೆ: ತಾಲ್ಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಸೋಮವಾರ ಸರ್ಕಾರಿ ಹಿರಿಯ ಮಾದರಿ ಬಾಲಕರ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ನಡೆಯಿತು.

ಬೆಳಗ್ಗೆ 9ಕ್ಕೆ ಮತದಾನ ಪ್ರಾರಂಭವಾಗಿ 4 ಗಂಟೆಗೆ ಮುಕ್ತಾಯವಾಗಿತು. ಈಗಾಗಲೇ ವಿವಿಧ ಇಲಾಖೆಗಳ 24 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು ಕೇವಲ 10 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ 24 ಮಂದಿ ಸ್ಪರ್ಧೆಯಲ್ಲಿದ್ದರು.

ಪ್ರಾಥಮಿಕ ಶಾಲೆಯ ವಿಭಾಗದಲ್ಲಿ 583, ಪ್ರೌಢಶಾಲೆ 132, ಐಟಿಐ 27, ತಾಲ್ಲೂಕು ಪಂಚಾಯಿತಿ 52, ಪಿಯುಸಿ ಮತ್ತು ಪದವಿ ಕಾಲೇಜಿನ 46 ಮಂದಿ ಮತದಾರರಿದ್ದರು.

ADVERTISEMENT

ಆಯ್ಕೆ: ಸರ್ಕಾರಿ ಪ್ರೌಢಶಾಲಾ ವಿಭಾಗದಿಂದ ಅಂಚೀಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಂ.ಬಿ.ಲೋಕೇಶ್, ಪಿಯುಸಿ ವಿಭಾಗದಿಂದ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಎಚ್.ಪಿ.ಪಾಪಣ್ಣ, ಗ್ರಾಮ ಪಂಚಾಯಿತಿಯಿಂದ ನರೇಂದ್ರ ಜಿ.ಎಸ್, ಸರ್ಕಾರಿ ಐಟಿಐ ಕಾಲೇಜು ವಿಭಾಗದಿಂದ ಜಯಕುಮಾರ ಸ್ವಾಮಿ ಗೆಲುವು ಸಾಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.