ADVERTISEMENT

ಕುಣಿಗಲ್: ಚರ್ಚೆಗೆ ಗ್ರಾಸವಾದ ಸರ್ಕಾರಿ ನೌಕರರ ಸಂಘದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 4:14 IST
Last Updated 7 ನವೆಂಬರ್ 2024, 4:14 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

(ಸಾಂದರ್ಭಿಕ ಚಿತ್ರ)

ಕುಣಿಗಲ್: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ್ಯ, ಖಜಾಂಚಿ ಮತ್ತು ರಾಜ್ಯ ಪರಿಷತ್‌ ಸದಸ್ಯರ ಚುನಾವಣೆ ನವೆಂಬರ್ 16ಕ್ಕೆ ನಿಗದಿಯಾಗಿದ್ದು, ನಾಮಪತ್ರ ಸಲ್ಲಿಕೆಗೆ ನವೆಂಬರ್ 7 ಅಂತಿಮ ದಿನ. ಶಾಸಕ ರಂಗನಾಥ್ ಅಧ್ಯಕ್ಷತೆಯಲ್ಲಿ ಸಂಘದ ನಿರ್ದೇಶಕರ ಸಭೆ ನಡೆದು ಅಧ್ಯಕ್ಷರ ಆಯ್ಕೆಯಾಗಿ ನಾಮಪತ್ರ ಸಲ್ಲಿಕೆಗೆ ಶಾಸಕರು ಸೂಚನೆ ನೀಡಿದ್ದಾರೆ ಎಂಬ ಆರೋಪ ತಾಲ್ಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ವಿಷಯದಲ್ಲಿ ತಾಲ್ಲೂಕನ್ನು ಪ್ರತಿನಿಧಿಸಿದ ಯಾವ ಶಾಸಕರು ಮಧ್ಯಪ್ರವೇಶ ಮಾಡಿರಲ್ಲಿಲ್ಲ. ಸಂಘದಲ್ಲಿ 33 ನಿರ್ದೇಶಕರ ಪೈಕಿ 20 ಅವಿರೋಧ, 13 ನಿರ್ದೇಶಕರು ಚುನಾಯಿತರಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾದ ನಂತರ ಪ್ರಬಲ ಆಕಾಂಕ್ಷಿಗಳು ಶಾಸಕರ ಮೊರೆ ಹೋದ ಪರಿಣಾಮ ಗೊಂದಲ ಉಂಟಾಗಿತ್ತು. ಅಧಿಕಾರಿ ಹಂಚಿಕೆ ಸೂತ್ರಕ್ಕಾಗಿ ಬುಧವಾರ ಸಭೆ ನಡೆಸಿದರು.

ಸಭೆಯಲ್ಲಿ ಐದು ಮಂದಿ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳಾಗಿದ್ದು (ಶಿವರಾಮಯ್ಯ, ಶಿವಣ್ಣ, ವೆಂಕಟೇಶ್, ಹನುಮಂತರಾಯಪ್ಪ ಮತ್ತು ಪ್ರಕಾಶ್) ಶಾಸಕರು ಒಮ್ಮತಕ್ಕೆ ಬರಲು ಸೂಚಿಸಿದಾಗ ಶಿವರಾಮಯ್ಯ ಮತ್ತು ಶಿವಣ್ಣ ನಡುವೆ ಅಧಿಕಾರ ಹಂಚಿಕೆ ಸೂತ್ರದಿಂದ ಮುಂದುವರಿಯಲು ಸಲಹೆ ನೀಡಿ, ಶಿವಣ್ಣ ನಿವೃತ್ತಿ ದಿನಗಳು ಹತ್ತಿರವಾಗಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಶಾಸಕರು ನೀಡಿದ ಸೂಚನೆ ಮೇರೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಖಜಾಂಚಿ ಸ್ಥಾನಕ್ಕೆ ಹರೀಶ್ ಮತ್ತು ವಿಶ್ವಪ್ರಕಾಶ್ ನಡುವೆ ಪೈಪೋಟಿ ಇದ್ದ ಕಾರಣ ಲಾಟರಿ ಮೂಲಕ ವಿಶ್ವಪ್ರಕಾಶ್ ಹೆಸರು ಬಂದು ನಾಮಪತ್ರ ಸಲ್ಲಿಕೆಗೆ ಸೂಚನೆ ನೀಡಿದ್ದಾರೆ. ರಾಜ್ಯ ಪರಿಷತ್ತಿಗೆ ಆಕಾಂಕ್ಷಿಗಳು ಹೆಚ್ಚಾಗಿ ಒಮ್ಮತ ಮೂಡದ ಕಾರಣ ಸ್ಥಗಿತಗೊಳಿಸಿದ್ದಾರೆ. ಗುರುವಾರ ಅಂತಿಮವಾಗಲಿದೆ.

ಸಭೆಯಲ್ಲಿ ನಿರ್ದೇಶಕರಲ್ಲದವರು, ಚುನಾವಣೆಯಲ್ಲಿ ಸೋತವರು ಭಾಗವಹಿಸಿದ್ದು, ಅವರ ಅಸಂಬದ್ದ ಸಲಹೆಗಳನ್ನು ಶಾಸಕರು ತಿರಸ್ಕರಿಸಿ ಎಚ್ಚರಿಕೆ ನೀಡಿದ ಘಟನೆಯೂ ನಡೆದಿದೆ. ಶಾಸಕರು ಪ್ರತಿಯೊಬ್ಬ ನಿರ್ದೇಶಕರ ಅಭಿಪ್ರಾಯ ಸಂಗ್ರಹಿಸಿ ಸೂಚನೆ ಮತ್ತು ಎಚ್ಚರಿಕೆ ನೀಡಿದ್ದರೂ ಅಸಹಾಯಕರಾದ ಕೆಲ ನಿರ್ದೇಶಕರು ಸಂವಿಧಾನ ವ್ಯವಸ್ಥೆಯಲ್ಲಿ ಇದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಬಲರಿಗೆ ಅಧಿಕಾರ ಸಿಗುತ್ತಿದೆ. ಕೆಳವರ್ಗದವರಿಗೆ ಅನ್ಯಾಯವಾಗುತ್ತಿದ್ದರೂ , ಸಾಮಾಜಿಕ ನ್ಯಾಯ ನೀಡುವಲ್ಲಿ ತಮ್ಮ ಅಭಿಪ್ರಾಯಗಳಿಗೆ ಮಾನ್ಯತೆ ಸಿಗದ ಕಾರಣ ಗುರುವಾರ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಚುನಾವಣೆಗೆ ಹೋಗುವುದಾಗಿ ಕೆಲವು ನಿರ್ದೇಶಕರು ತಿಳಿಸಿದ್ದಾರೆ.

ಸಭೆಯಲ್ಲಿ ಕಾಂಗ್ರೆಸ್ ಪ್ರಮುಖ ಮುಖಂಡರು ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.