ADVERTISEMENT

ತುಮಕೂರು: ನ. 23ರಂದು ಗ್ರಾ.ಪಂ ಚುನಾವಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 5:35 IST
Last Updated 22 ಅಕ್ಟೋಬರ್ 2024, 5:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ವಿವಿಧ ಕಾರಣಗಳಿಂದ ತೆರವಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದು, ನ. 23ರಂದು ಮತದಾನ ನಡೆಯಲಿದೆ.

ಜಿಲ್ಲೆಯ 27 ಗ್ರಾಮ ಪಂಚಾಯಿತಿಗಳ 30 ಸದಸ್ಯ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ತುಮಕೂರು ತಾಲ್ಲೂಕಿನ ಸ್ವಾಂದೇನಹಳ್ಳಿ, ಹಿರೇಹಳ್ಳಿ (2 ಸ್ಥಾನ), ಚಿಕ್ಕನಾಯಕಹಳ್ಳಿಯ ದೊಡ್ಡಎಣ್ಣೆಗೆರೆ, ಚೌಳಕಟ್ಟೆ, ತಿಪಟೂರಿನ ಹುಚ್ಚಗೊಂಡನಹಳ್ಳಿ, ಮಸವನಘಟ್ಟ, ತುರುವೇಕೆರೆಯ ಆನೆಕೆರೆ (3 ಸ್ಥಾನ), ಕೊಂಡಜ್ಜಿ, ಶೆಟ್ಟಿಗೊಂಡನಹಳ್ಳಿ, ಕುಣಿಗಲ್‌ನ ಉಜ್ಜನಿ, ಅಮೃತೂರು, ಮಧುಗಿರಿಯ ಕೊಡಿಗೇನಹಳ್ಳಿ, ರಂಗಾಪುರ, ಗುಬ್ಬಿಯ ಮೂಗನಾಯಕನಕೋಟೆ, ಎಸ್.ಕೊಡಗೀಹಳ್ಳಿ, ಪೆದ್ದನಹಳ್ಳಿ, ಶಿವಪುರ, ಅಡಗೂರು ಹಾಗೂ ಜಿ.ಹೊಸಹಳ್ಳಿ. ಶಿರಾದ ಲಕ್ಷ್ಮಿಸಾಗರ, ದೊಡ್ಡ ಅಗ್ರಹಾರ, ಪಾವಗಡದ ತಿರುಮಣಿ, ಬ್ಯಾಡನೂರು, ಕಾಮನದುರ್ಗ (ನೀಲಮ್ಮನಹಳ್ಳಿ), ವದನಕಲ್ಲು, ರಂಗಸಮುದ್ರ ಹಾಗೂ ಕೊಡಮಡಗು ಗ್ರಾ.ಪಂ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ನ. 6ರಿಂದ 12ರ ವರೆಗೆ ನಾಮಪತ್ರ ಸಲ್ಲಿಸಬಹುದು. ನ. 13ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನ. 15ರ ಒಳಗೆ ಉಮೇದುವಾರಿಕೆ ಹಿಂಪಡೆಯಬಹುದು. ನ. 23ರಂದು ಮತದಾನ ನಡೆಯಲಿದೆ. ನ. 26ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ADVERTISEMENT

ಚುನಾವಣೆ ನಡೆಯುವ ಗ್ರಾ.ಪಂ ವ್ಯಾಪ್ತಿಯಲ್ಲಿ ನ. 6ರಿಂದ 26ರ ವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.