ADVERTISEMENT

ತುಮಕೂರು: ಎರಡನೇ ಬಾರಿಗೆ ಲೋಕಾಯುಕ್ತ ಬಲೆಗೆ ಬಿದ್ದ ನೌಕರ

​ಪ್ರಜಾವಾಣಿ ವಾರ್ತೆ
Published 15 ಮೇ 2024, 12:51 IST
Last Updated 15 ಮೇ 2024, 12:51 IST
<div class="paragraphs"><p>ನರಸಿಂಹಮೂರ್ತಿ</p></div>

ನರಸಿಂಹಮೂರ್ತಿ

   

ಗುಬ್ಬಿ (ತುಮಕೂರು): ಕಂದಾಯ ತನಿಖಾಧಿಕಾರಿಯೊಬ್ಬರು ಎರಡನೇ ಬಾರಿಗೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ. ಜಮೀನಿನ ಖಾತೆ ಬದಲಾವಣೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಿ.ಎಸ್‌.ಪುರ ಹೋಬಳಿಯ ಕಂದಾಯ ತನಿಖಾಧಿಕಾರಿ ನರಸಿಂಹಮೂರ್ತಿ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಸಿ.ಎಸ್‌.ಪುರ ಹೋಬಳಿ ಗದ್ದೆಹಳ್ಳಿ ಗ್ರಾಮದ ನಾಗರಾಜು ಅವರಿಗೆ ಖಾತೆ ಬದಲಾವಣೆ ಮಾಡಿಕೊಡಲು ₹10 ಸಾವಿರ ಲಂಚ ಕೇಳಿದ್ದರು. ಹಣ ನೀಡಲು ಒಪ್ಪದ ರೈತ ನಾಗರಾಜು ಲೋಕಾಯುಕ್ತರಿಗೆ ದೂರು ನೀಡಿದ್ದರು. ಬುಧವಾರ ಸಿ.ಎಸ್‌.ಪುರ ನಾಡ ಕಚೇರಿಯಲ್ಲಿ ಹಣ ನೀಡುವ ಸಂದರ್ಭದಲ್ಲಿ ಹಣದ ಸಮೇತ ಕಂದಾಯ ತನಿಖಾಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ADVERTISEMENT

ನರಸಿಂಹಮೂರ್ತಿ 2023ರ ಜುಲೈ 7ರಂದು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುವಾಗ ನಿವೇಶನದ ಖಾತೆ ಮಾಡಿಕೊಡಲು ಫಯಾಜ್‌ ಎಂಬುವರಿಗೆ ₹15 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.