ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗ ವರಲಕ್ಷ್ಮಮ್ಮ ಚಾರಿಟಬಲ್ ಫೌಂಡೇಷನ್, ಬೆಂಗಳೂರಿನ ಜಯದೇವ ಆಸ್ಪತ್ರೆ, ಆರ್.ಎನ್, ಚಾರಿಟಬಲ್ ಸಂಸ್ಥೆ ಮತ್ತು ಆದಿ ಚುಂಚನಗಿರಿ ಆಸ್ಪತ್ರೆ ಆಶ್ರಯದಲ್ಲಿ ಮಾರ್ಚ್ 3ರಂದು ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞ ಎಚ್.ಎಸ್. ನಟರಾಜ್ ಶೆಟ್ಟಿ ತಿಳಿಸಿದರು.
ಹುಲಿಯೂರುದುರ್ಗದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರಲಕ್ಷ್ಮಮ್ಮ ಚಾರಿಟಬಲ್ ಸಂಸ್ಥೆಯ ಉದ್ಘಾಟನೆಯ ಅಂಗವಾಗಿ ಶಿಬಿರ ಆಯೋಜಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಅರಿವು ಮತ್ತು ತಪಾಸಣೆ, ಚಿಕಿತ್ಸೆ ನೀಡುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಫೌಂಡೇಷನ್‌ನಿಂದ ಹುಲಿಯೂರುದುರ್ಗದಲ್ಲಿ 100 ಬೆಡ್ ಆಸ್ಪತ್ರೆ ಪ್ರಾರಂಭಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ಚುಂಚನಗಿರಿ ಆಸ್ಪತ್ರೆಯ ಡಾ. ಬಿ.ಎನ್. ರವಿ, ಶಿಬಿರದಲ್ಲಿ ನೂರಾರು ತಜ್ಞ ವೈದ್ಯರು ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಡಾ.ಶೀಲಾ ನಟರಾಜು, ಮುಖಂಡರಾದ ಕೆ.ಎಂ.ತಿಮ್ಮಪ್ಪ, ಎಚ್.ಎನ್.ನಟರಾಜು, ಮಾರುತಿ, ಗೋಪಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.