ADVERTISEMENT

ತುಮಕೂರು: 'ವಿದೇಶಿ ಮಹಿಳೆಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ'

ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2023, 14:31 IST
Last Updated 25 ನವೆಂಬರ್ 2023, 14:31 IST
<div class="paragraphs"><p>ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಿಪ್ಲಬಿಕ್‍ ಆಫ್ ಮಾಲ್ಡೀವ್ಸ್‌ನ ಎಚ್‌.ಇ.ಇಬ್ರಾಹಿಂ ಶಾಹೀಬ್‍ ಅವರನ್ನು ಸನ್ಮಾನಿಸಲಾಯಿತು.</p></div>

ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಿಪ್ಲಬಿಕ್‍ ಆಫ್ ಮಾಲ್ಡೀವ್ಸ್‌ನ ಎಚ್‌.ಇ.ಇಬ್ರಾಹಿಂ ಶಾಹೀಬ್‍ ಅವರನ್ನು ಸನ್ಮಾನಿಸಲಾಯಿತು.

   

ತುಮಕೂರು: ನಗರ ಹೊರ ವಲಯದ ಸಿದ್ಧಾರ್ಥ ಅಡ್ವಾನ್ಸ್ಡ್‌ ಹಾರ್ಟ್‌ ಸೆಂಟರ್‌ನಲ್ಲಿ ವಿದೇಶಿ ಮಹಿಳೆಗೆ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಉತ್ತರ ಆಫ್ರಿಕಾದ ಸಿಯೆರಾ ಲಿಯೋನ್‌ (65) ಎಂಬುವರಿಗೆ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಅತ್ಯಂತ ಕ್ಲಿಷ್ಟಕರವಾದ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಈ ಮೂಲಕ ಸಿದ್ಧಾರ್ಥ ಹಾರ್ಟ್ ಸೆಂಟರ್ ಮಾದರಿಯಾಗಿದೆ ಎಂದು ‘ಸಾಹೇ’ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ADVERTISEMENT

ಡಾ.ತಮಿಮ್‍ ಅಹ್ಮದ್ ಮತ್ತು ವೈದ್ಯರ ತಂಡ ಉತ್ತಮ ಕೆಲಸ ಮಾಡಿದೆ. ಭಾರತದಿಂದ ಇತರೆ ರಾಷ್ಟ್ರಗಳಿಗೆ ಚಿಕಿತ್ಸೆಗಾಗಿ ತೆರಳುವುದು ಸಹಜ. ಆದರೆ ಈಗ ಬೇರೆ ದೇಶದಿಂದ ನಮ್ಮ ರಾಷ್ಟ್ರಕ್ಕೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಮಹಿಳೆಯು ಹೃದಯ ಶಸ್ತ್ರಚಿಕಿತ್ಸೆಯ ನಂತರ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದರು.

ಸಿದ್ಧಾರ್ಥ ಅಡ್ವಾನ್ಸ್ಡ್‌ ಹಾರ್ಟ್‌ ಸೆಂಟರ್‌ ಮುಖ್ಯಸ್ಥ ಡಾ.ತಮೀಮ್ ಅಹ್ಮದ್, ‘ಅತಿ ಸೂಕ್ಷ್ಮವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿರುವುದು ಸಾಧನೆಯಾಗಿದೆ. ರೋಗಿಯ ಸಮಸ್ಯೆ ಕಂಡುಹಿಡಿದು ಅದಕ್ಕೆ ಪರಿಹಾರ ಕಂಡುಕೊಂಡು ಅವರ ಮುಖದಲ್ಲಿ ನಗು ಅರಳಿಸಲಾಗಿದೆ’ ಎಂದು ತಿಳಿಸಿದರು.

ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಪ್ರಭಾಕರ್‌, ಸಿದ್ಧಾರ್ಥ ಅಡ್ವಾನ್ಸ್ಡ್‌ ಹಾರ್ಟ್‌ ಸೆಂಟರ್‌ ಮುಖ್ಯಸ್ಥ ಡಾ.ತಮೀಮ್ ಅಹ್ಮದ್, ಜಿಲ್ಲಾ ಉಸ್ತುವಾರಿ ಜಿ.ಪರಮೇಶ್ವರ, ರಿಪ್ಲಬಿಕ್‍ ಆಫ್ ಮಾಲ್ಡೀವ್ಸ್‌ನ ಎಚ್‌.ಇ.ಇಬ್ರಾಹಿಂ ಶಾಹೀಬ್‍, ಚಲನಚಿತ್ರ ನಟ ಚೇತನ್‌ ಅಹಿಂಸಾ, ಸಾಹೇ ವಿ.ವಿ ಕುಲಪತಿ ಪ್ರೊ.ಕೆ.ಬಿ.ಲಿಂಗೇಗೌಡ,  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.