ADVERTISEMENT

ಪಾವಗಡ | ಜಡಿ ಮಳೆ: ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 12:32 IST
Last Updated 17 ಅಕ್ಟೋಬರ್ 2024, 12:32 IST
ಪಾವಗಡ –ಕಲ್ಯಾಣದುರ್ಗ ಮುಖ್ಯರಸ್ತೆಯಿಂದ ಕೆಂಚಗಾನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿರುವುದು
ಪಾವಗಡ –ಕಲ್ಯಾಣದುರ್ಗ ಮುಖ್ಯರಸ್ತೆಯಿಂದ ಕೆಂಚಗಾನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿರುವುದು    

ಪಾವಗಡ: ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿದ ಜಡಿ ಮಳೆಗೆ ಗ್ರಾಮಗಳಲ್ಲಿ ಮನೆಗಳು ಬಿದ್ದಿವೆ. ಕೆಂಚಗಾನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ರೈಲ್ವೆ ಸೇತುವೆ ಕೆಳಗೆ ನೀರು ನಿಂತಿದೆ. ಗ್ರಾಮಕ್ಕೆ ಹೋಗಲು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಹಲವು ತಿಂಗಳುಗಳಿಂದ ಚರಂಡಿ ನಿರ್ಮಿಸಿ ರಸ್ತೆ ಸರಿಪಡಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಬೇಜವಾಬ್ಧಾರಿ ತೋರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಾಲ್ಲೂಕಿನ ಗಂಗಸಾಗರ, ಸಿಂಗರೆಡ್ಡಿಹಳ್ಳಿ, ಸಸಾಲಕುಂಟೆ, ‌ಗಂಗಸಾಗರ, ಗುಜ್ಜನಡು, ಕ್ಯಾತಗನಕೆರೆಯಲ್ಲಿ ಮನೆಗಳು ಉರುಳು ಬಿದ್ದಿವೆ. ವದನಕಲು ಗ್ರಾಮದ ಸಣ್ಣೀರಪ್ಪ ಎಂಬುವರಿಗೆ ಸೇರಿದ ಮೂರು ಮೇಕೆಗಳು ಮಳೆಯಿಂದ ಸಾವನ್ನಪ್ಪಿವೆ. 

ಪಾವಗಡ ತಾಲ್ಲೂಕು ಗಂಗಸಾಗರದ ತಿಮ್ಮಯ್ಯ ಎಂಬುವರ ಮನೆ ಬಿದ್ದಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT