ADVERTISEMENT

ಶಿರಾ: ತಾಲ್ಲೂಕಿಗೆ ಹೇಮಾವತಿ, ಭದ್ರಾ, ಎತ್ತಿನಹೊಳೆ ನೀರು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 4:46 IST
Last Updated 9 ನವೆಂಬರ್ 2024, 4:46 IST
ಶಿರಾ ತಾಲ್ಲೂಕಿನ ಮದಲೂರು ಕೆರೆ ಕೋಡಿ ಬೀಳುವ ಹಂತದಲ್ಲಿದ್ದು, ಶುಕ್ರವಾರ ಶಾಸಕ ಟಿ.ಬಿ.ಜಯಚಂದ್ರ ವೀಕ್ಷಿಸಿದರು
ಶಿರಾ ತಾಲ್ಲೂಕಿನ ಮದಲೂರು ಕೆರೆ ಕೋಡಿ ಬೀಳುವ ಹಂತದಲ್ಲಿದ್ದು, ಶುಕ್ರವಾರ ಶಾಸಕ ಟಿ.ಬಿ.ಜಯಚಂದ್ರ ವೀಕ್ಷಿಸಿದರು    

ಶಿರಾ: ತಾಲ್ಲೂಕು ಶಾಶ್ವತ ನೀರಾವರಿ ಪ್ರದೇಶವಾಗಬೇಕು ಎನ್ನುವುದು ನನ್ನ ಬಯಕೆ. ಇದರ ಪ್ರಯತ್ನವಾಗಿ ಹೇಮಾವತಿ ಜೊತೆಗೆ ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ನೀರನ್ನು ಶೀಘ್ರ ತಾಲ್ಲೂಕಿಗೆ ಹರಿಸುವುದಾಗಿ ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ತಾಲ್ಲೂಕಿನ ಮದಲೂರು ಕೆರೆ ಕೋಡಿ ಬೀಳುವ ಹಂತದಲ್ಲಿದ್ದು, ಶುಕ್ರವಾರ ವೀಕ್ಷಿಸಿ ಮಾತನಾಡಿದರು. ಶಿರಾದ ದೊಡ್ಡಕೆರೆಗೆ ನವೆಂಬರ್‌ 4ರಂದು ಪದಾರ್ಪಣೆ ಮಾಡಿದೆ. ಇದು ತಾಲ್ಲೂಕಿನ ಇತಿಹಾಸದಲ್ಲಿ ಮಹತ್ವದ ದಿನವಾಗಿದೆ ಎಂದರು.

ಮುಂದಿನ ವರ್ಷ ಭದ್ರಾ ಮೇಲ್ದಂಡೆ ಯೋಜನೆ ನೀರು ತಾಲ್ಲೂಕಿಗೆ ಹರಿದು ಬರಲಿದ್ದು, ಇದರಿಂದ 70ಕ್ಕೂ ಹೆಚ್ಚು ಕೆರೆಗಳು ತುಂಬಲಿದೆ. ಎತ್ತಿನಹೊಳೆ ಯೋಜನೆಯಡಿ ಹುಲಿಕುಂಟೆ ಹೋಬಳಿಗೆ ನೀರು ಹರಿಸಲಾಗುವುದು ಎಂದರು.

ADVERTISEMENT

ಜಿ.ಪಂ‌ ಮಾಜಿ ಸದಸ್ಯ ಪರ್ವತಪ್ಪ, ಡಿ.ಸಿ.ಅಶೋಕ್, ಸುಧಾಕರ್ ಗೌಡ, ಗ್ರಾ.ಪಂ.ಸದಸ್ಯ ಗಿಡಗನಹಳ್ಳಿ ರಂಗನಾಥ್, ಮದಲೂರು ಶಿವಣ್ಣ, ಎತ್ತಪ್ಪನಹಟ್ಟಿ ಕಾಳಯ್ಯ, ಗೊಲ್ಲಹಳ್ಳಿ ಕೃಷ್ಣಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.