ADVERTISEMENT

ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಎಲ್ಇಡಿ ಬಲ್ಪ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 15:27 IST
Last Updated 31 ಮಾರ್ಚ್ 2023, 15:27 IST

ತಿಪಟೂರು: ಸೂಕ್ತ ದಾಖಲೆ ಇಲ್ಲದೆ ಸರಕು ವಾಹನದಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಇನ್ವೆರ್ಟರ್ ಲ್ಯಾಂಪ್ ಹಾಗೂ ಎಲ್ಇಡಿ ಬಲ್ಪ್ ಗಳನ್ನು ಚುನಾವಣಾ ಸಂಚಾರಿ ಜಾಗೃತ ದಳದ ಸಿಬ್ಬಂದಿ ಶುಕ್ರವಾರ ಸಂಜೆ ವಶಕ್ಕೆ ಪಡೆದಿದ್ದಾರೆ.

ತಿಪಟೂರು ತಾಲ್ಲೂಕಿನ ಬಂಡಿಹಳ್ಳಿ ಗೇಟ್ ಬಳಿ ತಪಾಸಣೆ ನಡೆಸುವ ವೇಳೆ ಕೆ.ಎ. 25 ಬಿ 2160 ವಾಹನದಲ್ಲಿ ಸಮರ್ಪಕ ದಾಖಲೆ ಇಲ್ಲದ ಸುಮಾರು ₹6,84,001 ಮೌಲ್ಯದ ಎಲ್ಇಡಿ ಬಲ್ಪ್ ಗಳು ದೊರೆತಿವೆ.

ಸಾಮಗ್ರಿಗಳನ್ನು ವಾಹನದ ಮೂಲಕ ಬೆಂಗಳೂರಿನ ಆಸ್ಪೈರ್ ಅಂಡ್ ಇನ್ನೋವೆಟಿವ್ ಅಡ್ವಿಟೈಸಿಂಗ್ ಪ್ರೈ.ಲಿ ನಿಂದ ತಿಪಟೂರಿನ #532/377, 4ನೇ ಮುಖ್ಯರಸ್ತೆ, ಕೆ.ಆರ್.ಬಡಾವಣೆಗೆ ಸಾಗಿಸಲಾಗುತ್ತಿತ್ತು. ಈ ವಾಹನದಲ್ಲಿ ಬಜಾಜ್ 10 ಡಬ್ಲೂ ಇನ್ವೆರ್ಟರ್ ಲ್ಯಾಂಪ್ ಗಳ 60 ಬಾಕ್ಸ್ , ಒಟ್ಟು 720 ಬಲ್ಪ್ ಗಳಿದ್ದವು.

ADVERTISEMENT

ಸಂಚಾರಿ ಜಾಗೃತ ದಳದ ಚುನಾವಣಾ ಅಧಿಕಾರಿ ಎಚ್.ಆರ್. ಚಂದ್ರಶೇಖರ್ ನೇತೃತ್ವದ ತಂಡವು ವಾಹನದ ಚಾಲಕ ರೇಣುಕಯ್ಯ ಮತ್ತು ವಾಹನವನ್ನು ವಶಕ್ಕೆ ಪಡೆದಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.