ಕುಣಿಗಲ್: ಪಟ್ಟಣದ ಕುಂಬಾರಗುಂಡಿ 20 ಎಕರೆ ದಿಶಾಂಕ್ ಆ‍್ಯಪ್‌ನಲ್ಲಿ ಖಬರ್ ಸ್ಥಾನ ಎಂದು ಹೆಸರು ಬರುತ್ತಿರುವುದನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿ ಖಂಡಿಸಿದ ಬಜರಂಗದಳ ಕಾರ್ಯಕರ್ತರು ತಹಶೀಲ್ದಾರ್ ರಶ್ಮೀ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಬಜರಂಗದಳದ ಅಧ್ಯಕ್ಷ ಗಿರೀಶ್ ಮಾತನಾಡಿ, ‘ತಾಲ್ಲೂಕಿನ ಕಸಬಾ ಹೋಬಳಿಯ 20 ಎಕರೆ ಜಮೀನು ಕಂದಾಯ ಮತ್ತು ಸರ್ವೆ ಇಲಾಖೆ ದಾಖಲೆಗಳಲ್ಲಿ ಕುಂಬಾರ ಗುಂಡಿ ಸ್ಮಶಾನ ಎಂಬ ಹೆಸರಿನಲ್ಲಿ ಹಲವಾರ ದಶಕಗಳಿಂದ ಬರುತ್ತಿತ್ತು. ಈಚೆಗೆ ದಿಶಾಂಕ್ ಆ‍್ಯಪ್‌ನಲ್ಲಿ ಖಬರ್ ಸ್ಥಾನ ಎಂದು ಬರುತ್ತಿದೆ’ ಎಂದು ಆರೋಪಿಸಿದರು.
ಕುಂಬಾರಗುಂಡಿ ಸ್ಮಶಾನ ವ್ಯಾಪ್ತಿಯಲ್ಲಿ ಆರ್ಯವೈಶ್ಯ, ಪರಿಶಿಷ್ಟ ಜಾತಿ, ಕ್ರಿಶ್ಚಿಯನ್, ತಿಗಳ, ಮಡಿವಾಳ, ಬಲಜಿಗ ಸೇರಿದಂತೆ ಇನ್ನೂ ಕೆಲ ಕೆಳವರ್ಗದವರು ಬಳಕೆ ಮಾಡಿ ಪೂರ್ವಜರ ಅಂತ್ಯಕ್ರಿಯೆ ಮಾಡಿದ್ದಾರೆ. ಸರ್ವರಿಗೂ ಅನುಕೂಲವಾಗಲೆಂದು ಮಾಜಿ ಸಂಸದ ಡಿ.ಕೆ.ಸುರೇಶ್ ದೂರದೃಷ್ಟಿಯ ಫಲದಿಂದ ಈ ಭಾಗದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಗೊಂದಲ, ಸಮಸ್ಯೆಗೆ ಕಾರಣವಾಗುವುದನ್ನು ತಪ್ಪಿಸಲು ಕುಂಬಾರಗುಂಡಿ ಸ್ಮಶಾನದ ಜಾಗದಲ್ಲಿ ಬರುತ್ತಿರುವ ಖಬರ್ ಸ್ಥಾನ ಹೆಸರು ಬದಲಿಸಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ತಿಕ, ಮಂಜುನಾಥ, ಅರವಿಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.