ADVERTISEMENT

ಹುಳಿಯಾರು: ಫೆ. 29ರಿಂದ ದೊಡ್ಡಬಿದರೆ ಪಾತಲಿಂಗೇಶ್ವರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 14:20 IST
Last Updated 27 ಫೆಬ್ರುವರಿ 2024, 14:20 IST

ಹುಳಿಯಾರು: ದೊಡ್ಡಬಿದರೆ ಪಾತಲಿಂಗೇಶ್ವರಸ್ವಾಮಿ, ಲಕ್ಕಮ್ಮದೇವಿ ಹಾಗೂ ಗ್ರಾಮದೇವತೆ ಕರಿಯಮ್ಮದೇವಿ, ಬೇವಿನಳಮ್ಮ ದೊಡ್ಡ ಜಾತ್ರಾ ಮಹೋತ್ಸವ ಇದೇ 29ರಿಂದ ಮಾರ್ಚ್‌ 6ರವರೆಗೆ ನಡೆಯಲಿದೆ.

29 ರಂದು ಮಧುವಣಗಿತ್ತಿ ಕಾರ್ಯಕ್ರಮ, ಮಡಿಲಕ್ಕಿಸೇವೆ, ಮಾ.1ರಂದು ಬಾನ, ರಾತ್ರಿ 8ಕ್ಕೆ ಮಧುವಣಗಿತ್ತಿ, ಮಡಿಲಕ್ಕಿಸೇವೆ, ಚಿಕ್ಕಬಿದರೆ ಕರಿಯಮ್ಮ ಮತ್ತು ಕೋಡಿಹಳ್ಳಿ ಕೊಲ್ಲಾಪುರದಮ್ಮ ಆಗಮನ, 2ರಂದು ಆರತಿ ಬಾನ, ಗಂಗಾಪೂಜೆ ನಡೆಯಲಿದೆ.

ಮಾ.3ರಂದು ರುದ್ರಾಭಿಷೇಕ, ಧ್ವಜಾರೋಹಣ, ದೋಣಿಸೇವೆ, 4ರಂದು ದೊಡ್ಡಪರುವು, 5 ರಂದು ಗಾವು ಸಿಗಿಯುವುದು ನಂತರ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. 6ರಂದು ಬೆಳಿಗ್ಗೆ 6ಕ್ಕೆ ದೊಡ್ಡರಥೋತ್ಸವ, ಓಕಳಿಸೇವೆ, ಮಹಾಮಂಗಳಾರತಿಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.