ತುಮಕೂರು:ಲೋಕಸಭಾ ಚುನಾವಣೆಯಲ್ಲಿ ಆದ ವ್ಯತ್ಯಾಸದಿಂದಾಗಿ ತುಮಕೂರು ಡಿ.ಸಿ.ಸಿ.ಬ್ಯಾಂಕ್ ಸೂಪರ್ ಸೀಡ್ ಮಾಡಿದ್ದರು. ಆದರೆ ಯಡಿಯೂರಪ್ಪ ನಾನಿದ್ದೇನೆ ಎಂದು ಧೈರ್ಯ ತುಂಬಿದರು. ಅವರಿಂದ ನನ್ನ ಈ ಸ್ಥಾನ ಉಳಿದಿದೆ ಎಂದು ಎಂದುಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.
ಇಲ್ಲಿ ನಡೆಯುತ್ತಿರುವ 66ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಮಾತನಾಡಿದ ಅವರು,ಬೇರೆ ಮನೆ ಮುರುಕರು ನನ್ನನ್ನು ಸಹಕಾರಿ ಆಂದೋಲನದಿಂದ ತೆಗೆಯಲು ಪ್ರಯತ್ನಿಸಿದರು. ಆದರೆ ಯಶಸ್ವಿ ಆಗಲಿಲ್ಲ. ಈ ಜಿಲ್ಲೆಯಲ್ಲಿ ಯಾರನ್ನು ಬೇಕಾದರೂ ಗೆಲ್ಲಿಸುವ, ಸೋಲಿಸುವ ಶಕ್ತಿ ನನಗಿದೆ ಎಂದು ಮನವರಿಕೆ ಆಗಿದೆ ಎಂದು ವಿಶ್ವಾಸದಿಂದ ನುಡಿದರು.
ಅಕಾಲಿಕವಾಗಿ ಮೃತಪಟ್ಟ ರೈತರ ಒಂದು ಲಕ್ಷದ ವರೆಗಿನ ಸಾಲವನ್ನು ನಮ್ಮ ಬ್ಯಾಂಕ್ ಮನ್ನಾ ಮಾಡುತ್ತಿದೆ. ಅದಕ್ಕಾಗಿ ಬ್ಯಾಂಕ್‌ನಲಾಭದ ಹಣ ಬಳಸಿಕೊಳ್ಳುತ್ತಿದೆ. ಈ ಪದ್ಧತಿಯನ್ನು ಎಲ್ಲ ಬ್ಯಾಂಕ್ ಗಳಿಗೆ ಅನ್ವಯಿಸಬೇಕು ಎಂದು ಅವರು ಒತ್ತಾಯಿಸಿದರು.
ತುಮಕೂರಿನಲ್ಲಿ ನಿತ್ಯ 10 ಲಕ್ಷ ಲೀಟರ್ ಹಾಲು ಸಂಸ್ಕರಿಸುವ ಸಾಮರ್ಥ್ಯವಿರುವ ಮೆಗಾಡೇರಿ ಸ್ಥಾಪಿಸಬೇಕು.ಯಶಸ್ವಿನಿ ಆರೋಗ್ಯ ಯೋಜನೆಯನ್ನು ಪುನಃ ಆರಂಭಿಸಬೇಕು ಎಂದು ಒತ್ತಾಯಿಸಿದರು.
ತಿಪಟೂರಿನಲ್ಲಿ ತೋಟಗಾರಿಕೆ ಕಾಲೇಜು
ತಿಪಟೂರು ತಾಲ್ಲೂಕಿನಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪಿಸುತ್ತೇವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಸಹಕಾರಿ ರಂಗದಲ್ಲಿನ ಚುನಾವಣೆಯಲ್ಲಿ ತೋರುವ ಉತ್ಸಾಹ, ಆಸಕ್ತಿಯನ್ನು ಸಹಕಾರಿ ಕ್ಷೇತ್ರ ಸುಧಾರಿಸಲು ಪದಾಧಿಕಾರಿಗಳು ತೋರಬೇಕು. ಇದರಿಂದ ಎಲ್ಲರ ಅಭ್ಯುದಯ ಆಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭ ಸಹಕಾರಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಗಣ್ಯರಿಗೆ ಸಹಕಾರಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.