ADVERTISEMENT

‘ಕಂದಮ್ಮ ನಗಲಿ’ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 7:34 IST
Last Updated 1 ಆಗಸ್ಟ್ 2024, 7:34 IST
ಕುಣಿಗಲ್ ತಾಲ್ಲೂಕು ಕೊತ್ತಗೆರೆಯಲ್ಲಿ ನಡೆದ ‘ಕಂದಮ್ಮ ನಗಲಿ’ ಜಾಥಾದಲ್ಲಿ ವೈದ್ಯೆ ಪುಷ್ಪಾ ಮಾತನಾಡಿದರು
ಕುಣಿಗಲ್ ತಾಲ್ಲೂಕು ಕೊತ್ತಗೆರೆಯಲ್ಲಿ ನಡೆದ ‘ಕಂದಮ್ಮ ನಗಲಿ’ ಜಾಥಾದಲ್ಲಿ ವೈದ್ಯೆ ಪುಷ್ಪಾ ಮಾತನಾಡಿದರು   

ಕುಣಿಗಲ್: ‘ಹೆಣ್ಣು ಮಗು ಹುಟ್ಟಲು ಹೆಣ್ಣೇ ಕಾರಣವೆಂದು ಹೆಣ್ಣನ್ನು ದೂಷಿಸುತ್ತಾರೆ. ಆದರೆ ಮಗುವಿನ ಲಿಂಗ ನಿರ್ಧಾರವಾಗುವುದು ಗಂಡಸಿನ ಸಂತಾನೋತ್ಪತ್ತಿ ಅಂಶದ ಆಧಾರದ ಮೇಲೆ’ ಎಂದು ಭಕ್ತರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪುಷ್ಪ ತಿಳಿಸಿದರು.

ಕೊತ್ತಗೆರೆ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಯಿಂದ ನಡೆದ ‘ಕಂದಮ್ಮ ನಗಲಿ’ ಜಾಥಾದಲ್ಲಿ ಅವರು ಮಾತನಾಡಿದರು.

ಮಹಿಳೆ ಗರ್ಭಿಣಿಯಾಗಿದ್ದಾಗ, ಹೆರಿಗೆ ನಂತರ ಒತ್ತಡ, ಆತಂಕ, ಇತ್ಯಾದಿ ತೊಂದರೆಗೆ ಒಳಗಾಗುತ್ತಾಳೆ. ತಾಯಿ ಮತ್ತು ಮಗು ಆರೋಗ್ಯವಾಗಿರಲು ಇದರ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ ಎಂದರು.

ADVERTISEMENT

ಪಿಡಿಒ ವನಸ್ವಾಮಿ ಮಾತನಾಡಿ, ಮಗುವಿನ ಲಿಂಗ ನಿರ್ಧಾರಕ್ಕೆ ಸಂಬಂಧಿಸಿದಂತೆ ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ‘ಕಂದಮ್ಮ ನಗಲಿ’ ಘೋಷದೊಂದಿಗೆ ಕೊತ್ತಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಬೀಟ್ ಪೊಲೀಸ್ ಮಿಥುನ್ ಮಾತನಾಡಿ, ಪ್ರತಿ ಕುಟುಂಬದಲ್ಲೂ ಮಹಿಳೆ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಅರಿವಿನ ಅಗತ್ಯವಿದ್ದು, ಸಂಬಂಧಪಟ್ಟ ಇಲಾಖೆಯವರು ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಿ ಸರ್ಕಾರದ ಯೋಜನೆಗಳ ಯಶಸ್ವಿಗೆ ಶ್ರಮಿಸಬೇಕು ಎಂದು ಹೇಳಿದರು.

ಪಂಚಾಯಿತಿ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಮತ್ತು ಮಕ್ಕಳು, ಗ್ರಾಮಸ್ಥರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.