ADVERTISEMENT

ಕೊರಟಗೆರೆ: ಮಳೆ ನೀರು ಸಂಗ್ರಹ ಸಂವಾದ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 6:51 IST
Last Updated 28 ಸೆಪ್ಟೆಂಬರ್ 2024, 6:51 IST
ಕಾಳೇನಹಳ್ಳಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಖುಷ್ಕಿ ಬೇಸಾಯ ಪ್ರಾಯೋಜನೆ ವಿಜ್ಞಾನಿಗಳು ರೈತರೊಂದಿಗೆ ಮಳೆ ನೀರು ಸಂಗ್ರಹ ಆಧಾರಿತ ಬೇಸಾಯ ಪದ್ಧತಿ ಬಗ್ಗೆ ಚರ್ಚಿಸಿದರು
ಕಾಳೇನಹಳ್ಳಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಖುಷ್ಕಿ ಬೇಸಾಯ ಪ್ರಾಯೋಜನೆ ವಿಜ್ಞಾನಿಗಳು ರೈತರೊಂದಿಗೆ ಮಳೆ ನೀರು ಸಂಗ್ರಹ ಆಧಾರಿತ ಬೇಸಾಯ ಪದ್ಧತಿ ಬಗ್ಗೆ ಚರ್ಚಿಸಿದರು   

ಕೊರಟಗೆರೆ: ತಾಲ್ಲೂಕಿನ ಕಾಳೇನಹಳ್ಳಿಯಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ ‘ಖುಷ್ಕಿ ಬೇಸಾಯ ಪ್ರಾಯೋಜನೆಯ ಮಳೆಯಾಶ್ರಿತ ಸಮಗ್ರ ಕೃಷಿ ಪದ್ಧತಿ’ ಸಂವಾದ ನಡೆಯಿತು.

ಕಾರ್ಯಕ್ರಮದಲ್ಲಿ ಭಾರತೀಯ ಅನುಸಂಧಾನ ಪರಿಷತ್ತಿನ ಪಂಚ ವಾರ್ಷಿಕ ಪರಿಶೀಲನಾ ಸಮಿತಿ ಅಧ್ಯಕ್ಷ ಪಂಜಾಬ್ ಸಿಂಗ್ ಹಾಗೂ ಸದಸ್ಯರಾದ ಎ.ಕೆ. ಸಿಂಗ್, ಪಿ. ರಾಮಸುಂದರಂ ಅವರು ರೈತರೊಂದಿಗೆ ಚರ್ಚಿಸಿದರು.

ಖುಷ್ಕಿ ಬೇಸಾಯದಲ್ಲಿ ಮಳೆ ನೀರು ಕೊಯ್ಲು ಮಾಡಿಕೊಳ್ಳಲು ಕೃಷಿ ಹೊಂಡ ನಿರ್ಮಿಸಿಕೊಂಡು ಹೆಚ್ಚು ಆದಾಯ ಬರುವ ಬೆಳೆಗಳನ್ನು ಬೆಳೆಯಬೇಕು. ಇದರಿಂದ ಖುಷ್ಕಿ ಭೂಮಿಯಲ್ಲಿ ಬೆಳೆಗಳ ವೈವಿಧ್ಯ ಹೆಚ್ಚಿಸಬಹುದು. ಸುಧಾರಿತ ಖುಷ್ಕಿ ತಾಂತ್ರಿಕತೆ ಅಳವಡಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಕೊರಟಗೆರೆ ತಾಲ್ಲೂಕು, ನೆಲಮಂಗಲ, ಮಾಗಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 200ಕ್ಕೂ ಹೆಚ್ಚು ಪ್ರಗತಿಪರ ರೈತರು ಪಾಲ್ಗೊಂಡಿದ್ದರು.

ಕೇಂದ್ರೀಯ ಖುಷ್ಕಿ ಬೇಸಾಯ ಸಂಶೋಧನಾ ಸಂಸ್ಥೆ, ಹೈದರಾಬಾದ್‌ನ ಪ್ರಧಾನ ವಿಜ್ಞಾನಿ ಜಿ.ರವೀಂದ್ರಚಾರಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಖುಷ್ಕಿ ಬೇಸಾಯ ಪ್ರಾಯೋಜನೆಯ ವಿಜ್ಞಾನಿಗಳಾದ ಮೂಡಲಗಿರಿಯಪ್ಪ, ಬಿ.ಜಿ ವಾಸಂತಿ, ಎಚ್.ಎಸ್. ಲತಾ, ಕೆ.ದೇವರಾಜ, ಡಿ.ಎಚ್.ರೂಪಶ್ರೀ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.