ADVERTISEMENT

ತುಮಕೂರು | ಕೆಪಿಎಸ್‌ಸಿ ಪರೀಕ್ಷೆ: 2 ಸಾವಿರ ಪರೀಕ್ಷಾರ್ಥಿಗಳು ಗೈರು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 14:41 IST
Last Updated 27 ಆಗಸ್ಟ್ 2024, 14:41 IST
ತುಮಕೂರಿನಲ್ಲಿ ಮಂಗಳವಾರ ಕೆಪಿಎಸ್‌ಸಿ ಪರೀಕ್ಷೆ ಬರೆದು ಹೊರ ಬಂದ ಯುವತಿಯರು
ತುಮಕೂರಿನಲ್ಲಿ ಮಂಗಳವಾರ ಕೆಪಿಎಸ್‌ಸಿ ಪರೀಕ್ಷೆ ಬರೆದು ಹೊರ ಬಂದ ಯುವತಿಯರು   

ತುಮಕೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಮಂಗಳವಾರ ಸುಸೂತ್ರವಾಗಿ ನಡೆಯಿತು.

ಗ್ರೂಪ್‌ ‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳ ಪರೀಕ್ಷೆಗೆ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ 6,065 ಮಂದಿ ಹಾಜರಾಗಬೇಕಿತ್ತು. ಬೆಳಿಗ್ಗೆ ನಡೆದ ಪತ್ರಿಕೆ–1ರ ಪರೀಕ್ಷೆಗೆ 3,681 ಮಂದಿ ಹಾಜರಾಗಿದ್ದು, 2,384 ಜನ ಗೈರಾಗಿದ್ದರು. ಮಧ್ಯಾಹ್ನ ನಡೆದ ಪತ್ರಿಕೆ–2ರ ಪರೀಕ್ಷೆಗೆ 3,667 ಜನ ಹಾಜರಾದರೆ, 2,398 ಜನ ಪರೀಕ್ಷೆಯಿಂದ ಹೊರಗುಳಿದರು.

ನಗರದ ಎಂಪ್ರೆಸ್‌ ಶಾಲೆ, ಸಿದ್ಧಗಂಗಾ ಕಾಲೇಜು ಸೇರಿದಂತೆ ಒಟ್ಟು 16 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪರೀಕ್ಷಾರ್ಥಿಗಳು ಬೆಳಿಗ್ಗೆಯೇ ಕೇಂದ್ರದ ಕಡೆ ಹೆಜ್ಜೆ ಹಾಕಿದರು.

ADVERTISEMENT

ಪರೀಕ್ಷಾ ಕೇಂದ್ರಗಳ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಯಾವುದೇ ಲೋಪದೋಷ ಇಲ್ಲದಂತೆ ಪರೀಕ್ಷೆ ನಡೆಸಲು ಪ್ರತಿ ನಾಲ್ಕು ಕೇಂದ್ರಗಳಿಗೆ ಒಬ್ಬರಂತೆ ಗ್ರೂಪ್-ಎ ವೃಂದದ ಅಧಿಕಾರಿಯನ್ನು ವೀಕ್ಷಕರನ್ನಾಗಿ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರನ್ನು ಸ್ಥಳೀಯ ನಿರೀಕ್ಷಣಾಧಿಕಾರಿಯಾಗಿ ನಿಯೋಜಿಸಲಾಗಿತ್ತು.

ತುಮಕೂರಿನ ಸಿದ್ಧಗಂಗಾ ಕಾಲೇಜಿನ ಪರೀಕ್ಷಾ ಕೇಂದ್ರದ ಬಳಿ ಮಂಗಳವಾರ ಪರೀಕ್ಷಾರ್ಥಿಗಳಿಂದ ಅಗತ್ಯ ಮಾಹಿತಿ ಪಡೆಯಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.