ADVERTISEMENT

ಗುಬ್ಬಿ: ಬಣಗುಟ್ಟಿದ ಸರ್ಕಾರಿ ಕಚೇರಿಗಳು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 13:31 IST
Last Updated 27 ಫೆಬ್ರುವರಿ 2024, 13:31 IST
<div class="paragraphs"><p>ಗುಬ್ಬಿಯಲ್ಲಿ ಸಿಬ್ಬಂದಿ ಕೊರತೆಯಿಂದ ತಾಲ್ಲೂಕು ಕಚೇರಿಗೆ ಸಾರ್ವಜನಿಕರ ಭೇಟಿ ವಿರಳವಾಗಿತ್ತು </p></div>

ಗುಬ್ಬಿಯಲ್ಲಿ ಸಿಬ್ಬಂದಿ ಕೊರತೆಯಿಂದ ತಾಲ್ಲೂಕು ಕಚೇರಿಗೆ ಸಾರ್ವಜನಿಕರ ಭೇಟಿ ವಿರಳವಾಗಿತ್ತು

   

ಗುಬ್ಬಿ: ತಾಲ್ಲೂಕಿನ ಎಲ್ಲ ಇಲಾಖೆಗಳ ಬಹುಪಾಲು ಸರ್ಕಾರಿ ನೌಕರರು ಸುಮಾರು 12 ಬಸ್‌ ಹಾಗೂ ಖಾಸಗಿ ಕಾರುಗಳಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಸರ್ಕಾರಿ ನೌಕರರ ರಾಜ್ಯಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ್ದರಿಂದ ಸರ್ಕಾರಿ ಕಚೇರಿಗಳು ಬಣಗುಡುತ್ತಿದ್ದವು.

ಪ್ರತಿದಿನವೂ ಜನ ಜಂಗುಳಿಯಿಂದ ಗಿಜಿಗುಡುತ್ತಿದ್ದ ತಾಲ್ಲೂಕು ಕಚೇರಿಯಲ್ಲಿ ಸಿಬ್ಬಂದಿ ಕಡಿಮೆ ಹಾಜರಾತಿಯಿಂದಾಗಿ ನಿರ್ಜನ ಪ್ರದೇಶದಂತೆ ಕಂಡು ಬಂದಿತು.

ADVERTISEMENT

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ಪರೀಕ್ಷೆ ನಡೆಯುತ್ತಿರುವ ಕಾರಣದಿಂದ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ವಹಿಸಿದ್ದರು. ಸ್ಥಳೀಯ ಆಡಳಿತ ಸಂಸ್ಥೆಯಾಗಿರುವ ಗ್ರಾಮ ಪಂಚಾಯಿತಿಗಳಲ್ಲಿಯೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.