ADVERTISEMENT

ತೆರೆದ ಕಿಟಕಿ ಮನೆಯ ಬೆಳಕಿಗೆ, ತೆರೆದ ಪುಸ್ತಕ ಮನದ ಬೆಳಕಿಗೆ: ಪಿ.ಎಚ್. ರಾಜೇಶ್

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 2:48 IST
Last Updated 23 ನವೆಂಬರ್ 2024, 2:48 IST
<div class="paragraphs"><p>ಪಾವಗಡದಲ್ಲಿ ಶುಕ್ರವಾರ ಗ್ರಂಥಾಲಯ ಸಪ್ತಾಹ ಆಚರಿಸಲಾಯಿತು</p></div>

ಪಾವಗಡದಲ್ಲಿ ಶುಕ್ರವಾರ ಗ್ರಂಥಾಲಯ ಸಪ್ತಾಹ ಆಚರಿಸಲಾಯಿತು

   

ಪಾವಗಡ: ಓದುವ ಹವ್ಯಾಸದಿಂದ ಜ್ಞಾನಾರ್ಜನೆ ಜೊತೆಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ಪುರಸಭೆ ಅಧ್ಯಕ್ಷ ಪಿ.ಎಚ್. ರಾಜೇಶ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಕೇಂದ್ರ ಗ್ರಂಥಾಲಯದಲ್ಲಿ ಶುಕ್ರವಾರ ನಡೆದ ಗ್ರಂಥಾಲಯ ಸಪ್ತಾಹದಲ್ಲಿ ಅವರು ಮಾತನಾಡಿದರು.

ADVERTISEMENT

ಯುವ ಜನತೆ, ಮಕ್ಕಳು ಮೊಬೈಲ್, ಟಿ.ವಿ ಬಳಕೆ ಕಡಿಮೆ ಮಾಡಿ ಪುಸ್ತಕ, ದಿನಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಉದ್ಯೋಗ, ಕೆಲಸ ಪಡೆಯಬೇಕಾದರೆ, ಶಾಲಾ-ಕಾಲೇಜು ಪಠ್ಯವಲ್ಲದೇ ಇತರೆ ಪುಸ್ತಕಗಳನ್ನೂ ಓದಬೇಕು. ಆಗ ಮಾತ್ರ ಉತ್ತಮ ಜೀವನ ಕಟ್ಟಿಕೊಳ್ಳಬಹುದು ಎಂದರು.

ಪಟ್ಟಣದಲ್ಲಿರುವ ಗ್ರಂಥಾಲಯ ಶೀಥಾಲಾವ್ಯಸ್ಥೆಯಲ್ಲಿದ್ದು, ಸೂಕ್ತ ಬೆಳಕು, ಸ್ಥಳ, ಆಸನಗಳ ಸಮಸ್ಯೆ ಇದೆ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ಸ್ಥಳದಲ್ಲಿ ನೂತನ ಗ್ರಂಥಾಲಯ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಗ್ರಂಥಾಲಯ ಮೇಲ್ವಿಚಾರಕ ಬಸವರಾಜು, ತೆರೆದ ಕಿಟಕಿ ಮನೆಯ ಬೆಳಕಿಗೆ, ತೆರೆದ ಪುಸ್ತಕ ಮನದ ಬೆಳಕಿಗೆ ಎಂಬಂತೆ ಓದುಗರ ರುಚಿಗೆ ತಕ್ಕಂತೆ ಸಾಧ್ಯವಾದಷ್ಟು ಉತ್ತಮ ಪುಸ್ತಕಗಳನ್ನು ಒದಗಿಸಲಾಗುತ್ತಿದೆ. ಗ್ರಂಥಾಲಯ ಸಂಪೂರ್ಣವಾಗಿ ಶಿಥಿಲಗೊಂಡಿದೆ. ಹೊಸ ಕಟ್ಟಡಕ್ಕೆ ಸ್ಥಳದ ಅವಶ್ಯಕತೆ ಇದೆ ಎಂದರು.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ರಂಗೋಲಿ, ರಸ ಪ್ರಶ್ನೆ, ಚಿತ್ರಕಲಾ, ಪ್ರಬಂಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕೇಶವ ಚಂದ್ರದಾಸ್, ಉಪನ್ಯಾಸಕ ತಿಪ್ಪೇಸ್ವಾಮಿ, ಶಿಕ್ಷಕಿ ಲತಾ, ಶಿಕ್ಷಕ ದೇವರಾಜು, ತಿಪ್ಪೇಸ್ವಾಮಿ, ಗ್ರಂಥಾಲಯ ಸಿಬ್ಬಂದಿ ನಾಗರಾಜು, ಕುಮಾರ್, ಪವನ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.