ADVERTISEMENT

ವೀರಶೈವ ಲಿಂಗಾಯತರಿಗೆ ಜೆಡಿಎಸ್‌ನಲ್ಲಿ ಗೌರವ ಇಲ್ಲ: ತುರುವೇಕೆರೆ ಬಿಜೆಪಿ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2023, 11:13 IST
Last Updated 24 ಏಪ್ರಿಲ್ 2023, 11:13 IST
ಪಟ್ಟಣದಲ್ಲಿ ವೀರಶೈವ ಲಿಂಗಾಯತ ಮುಖಂಡ ಸೊಪ್ಪಿನಹಳ್ಳಿ ಶಿವಬಸಪ್ಪ, ಬಿಜೆಪಿ ಅಭ್ಯರ್ಥಿ ಜಯರಾಮ್ ಎ.ಎಸ್ ಅವರಿಗೆ 10 ಸಾವಿರ ಠೇವಣಿ ಹಣ ನೀಡಲಾಯಿತು
ಪಟ್ಟಣದಲ್ಲಿ ವೀರಶೈವ ಲಿಂಗಾಯತ ಮುಖಂಡ ಸೊಪ್ಪಿನಹಳ್ಳಿ ಶಿವಬಸಪ್ಪ, ಬಿಜೆಪಿ ಅಭ್ಯರ್ಥಿ ಜಯರಾಮ್ ಎ.ಎಸ್ ಅವರಿಗೆ 10 ಸಾವಿರ ಠೇವಣಿ ಹಣ ನೀಡಲಾಯಿತು    

ತುರುವೇಕೆರೆ: ’ಜೆಡಿಎಸ್‍ನಲ್ಲಿ ವೀರಶೈವ ಲಿಂಗಾಯತರಿಗೆ ಕಿಂಚಿತ್ತೂ ಗೌರವ ಸಿಗುವುದಿಲ್ಲ. ಆದ್ದರಿಂದ ಯಾರೂ ಕೂಡ ಜೆಡಿಎಸ್‍ ಸೇರುವ ಮನಸ್ಸು ಮಾಡಬಾರದು’ ಬಿಜೆಪಿ ಅಭ್ಯರ್ಥಿ ಜಯರಾಮ್‍ ಎ.ಎಸ್‍ ಸಮುದಾಯದ ಮುಖಂಡರಿಗೆ ಕಿವಿಮಾತು ಹೇಳಿದರು.

ಪಟ್ಟಣದಲ್ಲಿ ವೀರಶೈವ ಲಿಂಗಾಯತ ಮುಖಂಡ ಸೊಪ್ಪಿನಹಳ್ಳಿ ಶಿವಬಸಪ್ಪ ಬಿಜೆಪಿಗೆ ನೀಡಿದ ₹10 ಸಾವಿರ ರೂಪಾಯಿ ಠೇವಣಿ ಹಣ ಸ್ವೀಕರಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ವೀರಶೈವ ಸಮುದಾಯ ಬಿಜೆಪಿ ಬೆಂಬಲಕ್ಕೆ ನಿಂತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು  ಸಮುದಾಯ ಹಿಂಬಾಲಿಸುತ್ತಿದ್ದು ಈ ಬಾರಿ ಗೆಲುವಿಗೆ ಲಿಂಗಾಯತರ ಪಾತ್ರ ಬಹಳ ಮುಖ್ಯ ಎಂದರು.

ADVERTISEMENT

ತಾಲ್ಲೂಕು ಬಿಜೆಪಿ ಅಧ್ಯಕ್ಷ ಕಲ್ಕರೆ ಮೃತ್ಯುಂಜಯ, ಮಾಜಿ ಅಧ್ಯಕ್ಷ ದುಂಡ ರೇಣುಕಯ್ಯ, ಮುಖಂಡರಾದ ಕಲ್ಲಪ್ಪ, ಕೊಂಡಜ್ಜಿ ವಿಶ್ವನಾಥ್, ಕುಮಾರಸ್ವಾಮಿ, ಟಿ.ಕೆ.ಪ್ರಭಾಕರ್, ಮಂಜುನಾಥ್, ಸೇರಿದಂತೆ ಹಲವಾರು ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.