ADVERTISEMENT

ತುಮಕೂರು | ಬ್ಯಾಂಕ್‌ ಹೆಸರಲ್ಲಿ ಲಿಂಕ್‌: ₹18 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 4:07 IST
Last Updated 7 ನವೆಂಬರ್ 2024, 4:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ‘ಆಧಾರ್‌ ಅಪ್‌ಡೇಟ್‌’ ಎಂದು ಬ್ಯಾಂಕ್‌ ಹೆಸರಿನಲ್ಲಿ ಲಿಂಕ್‌ ಕಳುಹಿಸಿ ನಿವೃತ್ತ ನೌಕರರೊಬ್ಬರಿಗೆ ₹18.50 ಲಕ್ಷ ವಂಚಿಸಲಾಗಿದೆ.

ನಗರ ಹೊರವಲಯದ ಸಿದ್ಧಾರ್ಥ ನಗರದ ಕಾಂತರಾಜು ಸೈಬರ್‌ ಕಳ್ಳರ ಬಲೆಗೆ ಸಿಲುಕಿ ಹಣ ಕಳೆದುಕೊಂಡವರು. ನ.5ರಂದು ಆರೋಪಿಗಳು ‘ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ’ ಎಂಬ ಹೆಸರಿನ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಸೇರಿಸಿದ್ದಾರೆ. ಸದರಿ ‘ಗ್ರೂಪ್‌ನಲ್ಲಿ ಯೂನಿಯನ್‌ ಬ್ಯಾಂಕ್‌ ಆಧಾರ್‌ ಅಪ್‌ಡೇಟ್‌ ಎಪಿಕೆ’ ಹೆಸರಿನಲ್ಲಿ ಫೈಲ್‌ ಕಳುಹಿಸಿದ್ದು, ಕಾಂತರಾಜು ಆ ಫೈಲ್‌ ಡೌನ್‌ಲೋಡ್‌ ಮಾಡಿದ್ದಾರೆ.

ಮಂಗಳವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಅಪರಿಚಿತರೊಬ್ಬರು ಕರೆ ಮಾಡಿ ‘ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಅಪ್‌ಡೇಟ್‌ ಆಗಿದೆ. ಚೆಕ್‌ ಮಾಡಿಕೊಳ್ಳಿ’ ಎಂದು ತಿಳಿಸಿದ್ದಾರೆ. ಇದಾದ ನಂತರ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು ₹18,50,010 ಹಣ ವರ್ಗಾವಣೆಯಾಗಿದೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.