ADVERTISEMENT

ತುಮಕೂರು: ಕೆಐಎಡಿಬಿ ಹೆಚ್ಚುವರಿ ನಿರ್ದೇಶಕರ ಮನೆ ಮೇಲೆ ಲೋಕಾಯುಕ್ತ ದಾಳಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 4:10 IST
Last Updated 19 ಜುಲೈ 2024, 4:10 IST
<div class="paragraphs"><p>ಕೆಐಎಡಿಬಿ ಹೆಚ್ಚುವರಿ ನಿರ್ದೇಶಕ ಸಿ.ಟಿ.ಮುದ್ದುಕುಮಾರ್</p></div>

ಕೆಐಎಡಿಬಿ ಹೆಚ್ಚುವರಿ ನಿರ್ದೇಶಕ ಸಿ.ಟಿ.ಮುದ್ದುಕುಮಾರ್

   

ತುಮಕೂರು: ಕೆಐಎಡಿಬಿ ಹೆಚ್ಚುವರಿ ನಿರ್ದೇಶಕ ಸಿ.ಟಿ.ಮುದ್ದುಕುಮಾರ್ ಅವರ ಮನೆಗಳು ಮತ್ತು ಕಾರ್ಖಾನೆ ಮೇಲೆ‌ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಮುದ್ದುಕುಮಾರ್ ಬೆಂಗಳೂರಿನ ಖನಿಜ ಭವನದಲ್ಲಿ ಕೆಲಸ ಮಾಡುತ್ತಿದ್ದಾರೆ. ನಗರದ ಬನಶಂಕರಿಯಲ್ಲಿರುವ ಮನೆ, ನಗರದ ‌ಹೊರವಲಯದ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಪ್ಲಾಸ್ಟಿಕ್ ಬಾಟಲಿ ತಯಾರಿಕಾ ಘಟಕ, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಮನೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ರಂಗನಾಥಪುರದಲ್ಲಿರುವ ಫಾರ್ಮ್ ಹೌಸ್, ಬೆಂಗಳೂರಿನ ನಾಗರಭಾವಿಯ 2ನೇ ಹಂತದಲ್ಲಿರುವ ವಾಸದ ಮನೆ, ರೇಸ್ ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಕಚೇರಿ ಸೇರಿ ಏಳು ಕಡೆ ದಾಳಿ ನಡೆಸಿದ್ದಾರೆ.

ADVERTISEMENT

ಲೋಕಾಯುಕ್ತ ಡಿವೈಎಸ್ ಪಿ ಬಿ.ಉಮಾಶಂಕರ್, ರಾಮಕೃಷ್ಣಯ್ಯ ನೇತೃತ್ವದಲ್ಲಿ, ಇನ್ ಸ್ಪೆಕ್ಟರ್ ಗಳಾದ ಶಿವರುದ್ರಪ್ಪ ಮೇಟಿ, ಮಹ್ಮದ್ ಸಲೀಂ ಇತರೆ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆ ಪರಿಶೀಲನೆಯಲ್ಲಿ‌ ತೊಡಗಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.