ADVERTISEMENT

ಗುಬ್ಬಿ | ರಥೋತ್ಸವದಲ್ಲಿ ಅವಘಡ: ತೇರಿನ ಚಕ್ರಕ್ಕೆ ಸಿಕ್ಕ ಕೈ ನುಜ್ಜುಗುಜ್ಜು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 12:34 IST
Last Updated 18 ಏಪ್ರಿಲ್ 2024, 12:34 IST
<div class="paragraphs"><p><strong>ಗುಬ್ಬಿ</strong> ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ವೀರಣ್ಣನಗುಡಿ ಗ್ರಾಮದ ವೀರಭದ್ರೇಶ್ವರ ಸ್ವಾಮಿ ರಥ</p></div>

ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ವೀರಣ್ಣನಗುಡಿ ಗ್ರಾಮದ ವೀರಭದ್ರೇಶ್ವರ ಸ್ವಾಮಿ ರಥ

   

ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ವೀರಣ್ಣನಗುಡಿ ಗ್ರಾಮದ ವೀರಭದ್ರೇಶ್ವರ ಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಜಾರಿಬಿದ್ದು, ರಥದ ಚಕ್ರಕ್ಕೆ ಸಿಲುಕಿದ್ದರ ಪರಿಣಾಮ, ಕೈ ಸಂಪೂರ್ಣ ಜಜ್ಜಿ ಹೋಗಿರುವ ಘಟನೆ ಗುರುವಾರ ನಡೆದಿದೆ.

ರಥೋತ್ಸವದ ಸಂದರ್ಭದಲ್ಲಿ ಸಮೀಪದಲ್ಲೇ ನಿಂತಿದ್ದ ನಾರನಹಳ್ಳಿ ಗ್ರಾಮದ ರುದ್ರೇಶ್ (40) ರಥ ಚಲಿಸುವಾಗ ಬಾಳೆ ಹಣ್ಣಿನ ಮೇಲೆ ಕಾಲಿಟ್ಟು ಜಾರಿಬಿದ್ದು ಈ ಅವಘಡ ಸಂಭವಿಸಿದೆ.

ADVERTISEMENT

ಸಮೀಪದಲ್ಲೇ ಇದ್ದ ಪೊಲೀಸರು ತಕ್ಷಣ ಎಚ್ಚೆತ್ತುಕೊಂಡು ರುದ್ರೇಶ್ ಅವರನ್ನು ಎಳೆದುಕೊಂಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಗಾಯಾಳುವನ್ನು ಚಿಕಿತ್ಸೆಗೆ ಕರೆದೊಯ್ಯಲು ಆಂಬುಲೆನ್ಸ್ ದೊರೆಯದ ಕಾರಣ ಪೊಲೀಸರ ವಾಹನದಲ್ಲೇ ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು.

ಗುಬ್ಬಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.