ADVERTISEMENT

ಹೆಚ್ಚುತ್ತಿದೆ ಮೊಬೈಲ್ ರೋಗ: ಲೇಖಕಿ ಬಾ.ಹ.ರಮಾಕುಮಾರಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 4:34 IST
Last Updated 23 ಅಕ್ಟೋಬರ್ 2024, 4:34 IST
ತುಮಕೂರು ವಿ.ವಿ ಕಲಾ ಕಾಲೇಜಿನ ಸಮಾಜಕಾರ್ಯ ವಿಭಾಗ ಮಂಗಳವಾರ ಹಮ್ಮಿಕೊಂಡಿದ್ದ ಹೊಸ ವಿದ್ಯಾರ್ಥಿಗಳ ಸ್ವಾಗತ ಸಮಾರಂಭಕ್ಕೆ ಲೇಖಕಿ ಬಾ.ಹ.ರಮಾಕುಮಾರಿ ಚಾಲನೆ ನೀಡಿದರು. ಕವಯತ್ರಿ ರಂಗಮ್ಮ ಹೊದೇಕಲ್, ಪ್ರೊ.ಬಿ.ರಮೇಶ್, ಪ್ರೊ.ಕೆ.ಜಿ.ಪರಶುರಾಮ ಉಪಸ್ಥಿತರಿದ್ದರು
ತುಮಕೂರು ವಿ.ವಿ ಕಲಾ ಕಾಲೇಜಿನ ಸಮಾಜಕಾರ್ಯ ವಿಭಾಗ ಮಂಗಳವಾರ ಹಮ್ಮಿಕೊಂಡಿದ್ದ ಹೊಸ ವಿದ್ಯಾರ್ಥಿಗಳ ಸ್ವಾಗತ ಸಮಾರಂಭಕ್ಕೆ ಲೇಖಕಿ ಬಾ.ಹ.ರಮಾಕುಮಾರಿ ಚಾಲನೆ ನೀಡಿದರು. ಕವಯತ್ರಿ ರಂಗಮ್ಮ ಹೊದೇಕಲ್, ಪ್ರೊ.ಬಿ.ರಮೇಶ್, ಪ್ರೊ.ಕೆ.ಜಿ.ಪರಶುರಾಮ ಉಪಸ್ಥಿತರಿದ್ದರು    

ತುಮಕೂರು: ಯುವ ಸಮೂಹಕ್ಕೆ ಮೊಬೈಲ್ ರೋಗ ಅಂಟಿದ್ದು, ಇಂತಹ ವ್ಯಸನದಿಂದ ವಿದ್ಯಾರ್ಥಿಗಳು ಹೊರಬಂದು ಆರೋಗ್ಯಕರ ಸಮಾಜ ನಿರ್ಮಿಸುವ ಸಮಾಜಮುಖಿ ಪ್ರವೃತ್ತಿ ರೂಪಿಸಿಕೊಳ್ಳಬೇಕು ಎಂದು ಲೇಖಕಿ ಬಾ.ಹ.ರಮಾಕುಮಾರಿ ಸಲಹೆ ಮಾಡಿದರು.

ವಿಶ್ವವಿದ್ಯಾಲಯ ಕಲಾ ಕಾಲೇಜಿನ ಸಮಾಜಕಾರ್ಯ ವಿಭಾಗ ಮಂಗಳವಾರ ಹಮ್ಮಿಕೊಂಡಿದ್ದ ಹೊಸ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ‘ಯುವಜನತೆಯ ಮುಂದಿರುವ ಸವಾಲುಗಳು’ ಕುರಿತು ಉಪನ್ಯಾಸ ನೀಡಿದರು.

ಸಮಾಜದ ಸಮಸ್ಯೆಗಳಿಗೆ ಕಿವಿಗೊಡದೆ, ಕ್ರಿಯಾಶೀಲತೆ ಕಳೆದುಕೊಂಡು ಬದುಕುತ್ತಿರುವ ವಿದ್ಯಾರ್ಥಿಗಳಲ್ಲಿ ಪಂಚೇಂದ್ರಿಯ ಸ್ತಬ್ಧವಾಗಿವೆ. ವೃತ್ತಿ– ಪ್ರವೃತ್ತಿಯ ವ್ಯತ್ಯಾಸ ತಿಳಿಯದಾಗಿದೆ. ಮೆರಿಟ್ ಶಿಕ್ಷಣಕ್ಕಿಂತ ಅನುಭವ- ಅನುಭಾವದ ಶಿಕ್ಷಣ ಮುಖ್ಯ. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಶಿಕ್ಷಣ, ವಾಸ್ತವತೆಯನ್ನು ಎತ್ತಿತೋರಿಸುವ ಜ್ಞಾನ ರೂಪಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು.

ADVERTISEMENT

ದುರ್ಬಲ ಹಾಗೂ ಸಮತೋಲನದ ಮನಸ್ಥಿತಿಯಿಂದ ಸಮಸ್ಯೆಗಳೇ ಹೆಚ್ಚು. ಪ್ರಬಲ ಮನಃಸ್ಥಿತಿ ಬದುಕಿಗೆ ಅವಕಾಶಗಳನ್ನು ತೆರೆದಿಡುತ್ತವೆ ಎಂದರು.

ಕವಯತ್ರಿ ರಂಗಮ್ಮ ಹೊದೇಕಲ್, ‘ಯುವ ಸಮೂಹವನ್ನು ಒಂದೇ ತಕ್ಕಡಿಯಲ್ಲಿ ತೂಗಿ, ವ್ಯಕ್ತಿತ್ವಕ್ಕೆ ಪೆಟ್ಟಾಗುವ ತೀರ್ಪು ನೀಡಬಾರದು. ಅವರಲ್ಲಿ ಕನಸು ಬಿತ್ತಬೇಕು. ಅವರ ಆಸೆ, ಕನಸುಗಳನ್ನು ಕೊಂದು ಬದುಕನ್ನು ಬಂಜರು ಮಾಡಬಾರದು’ ಎಂದು ತಿಳಿಸಿದರು.

ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ.ಬಿ.ರಮೇಶ್, ಪ್ರಾಧ್ಯಾಪಕ ಕೆ.ಜಿ.ಪರಶುರಾಮ, ಸಮಾಜಕಾರ್ಯ ವಿಭಾಗದ ಸಂಯೋಜಕಿ ಕೆ.ಎಸ್.ಗಿರಿಜಾ, ಉಪನ್ಯಾಸಕರಾದ ತೋತ್ಯಾ ನಾಯ್ಕ, ಜಿ.ಪ್ರಹ್ಲಾದ, ಬಿ.ಸಿ.ಭಾನುನಂದನ್, ಕೆ.ಪಿ.ಹೇಮಂತ್ ಕುಮಾರ್, ಎಸ್.ರಮೇಶ್, ಸಿ.ಸಿದ್ದೇಶ್, ಪಿ.ಟಿ.ಡೈಸನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.