ADVERTISEMENT

ಜಿಟಿಟಿಸಿಯಿಂದ ಹೊಸ ಕೋರ್ಸ್‌ ಶುರು

​ಪ್ರಜಾವಾಣಿ ವಾರ್ತೆ
Published 25 ಮೇ 2024, 4:48 IST
Last Updated 25 ಮೇ 2024, 4:48 IST
ಅಶ್ವಿನ್‍ಕುಮಾರ್‌ ಎಸ್.ಸೋಮಣ್ಣನವರ್
ಅಶ್ವಿನ್‍ಕುಮಾರ್‌ ಎಸ್.ಸೋಮಣ್ಣನವರ್   

ತುಮಕೂರು: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಹೊಸದಾಗಿ ಎರಡು ಡಿಪ್ಲೊಮಾ ಕೋರ್ಸ್‌ ಆರಂಭಿಸಲಾಗಿದೆ.

‘ಡಿಪ್ಲೊಮಾ ಇನ್‌ ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ಮತ್ತು ಡಿಪ್ಲೊಮಾ ಇನ್‌ ಮೆಕಟ್ರಾನಿಕ್ಸ್‌’ ಎಂಬ ಕೋರ್ಸ್‌ ಆರಂಭಿಸಿದ್ದು, ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಆಸಕ್ತರು ಮೇ 27ರ ಒಳಗೆ ಅರ್ಜಿ ಸಲ್ಲಿಸಬಹುದು ಎಂದು ಜಿಟಿಟಿಸಿ ಪ್ರಾಂಶುಪಾಲ ಅಶ್ವಿನ್‍ಕುಮಾರ್‌ ಎಸ್.ಸೋಮಣ್ಣನವರ್ ಇಲ್ಲಿ ಶುಕ್ರವಾರ ಮಾಹಿತಿ ನೀಡಿದರು.

ಡಿಪ್ಲೊಮಾ ಇನ್‌ ಟೂಲ್‌ ಆ್ಯಂಡ್‌ ಡೈ ಮೇಕಿಂಗ್‌ ಕೋರ್ಸ್‌ಗೂ ಅರ್ಜಿ ಸಲ್ಲಿಸಬಹುದು. ಮೂರು ವರ್ಷದ ತರಗತಿ, ಒಂದು ವರ್ಷ ತರಬೇತಿ ಸೇರಿ ನಾಲ್ಕು ವರ್ಷದ ಕೋರ್ಸ್‌ಗಳಾಗಿವೆ. ರಾಜ್ಯ ಕೌಶಲ ಅಭಿವೃದ್ಧಿ ಮಂಡಳಿ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಡಿ ಜಿಟಿಟಿಸಿ ಕಾರ್ಯ ನಿರ್ವಹಿಸುತ್ತಿದೆ. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅನುತ್ತೀರ್ಣರಾದವರಿಗೆ ತರಬೇತಿ ನೀಡುತ್ತಿದ್ದು, ಆಸಕ್ತರು ಇದರ ಪ್ರಯೋಜನ ಪಡೆಯಬಹುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ತರಬೇತಿ ಕೇಂದ್ರದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಹಾಸ್ಟೆಲ್‌ ಆರಂಭವಾಗಲಿದೆ. ನುರಿತ ಬೋಧಕರಿದ್ದು, ರಾಷ್ಟ್ರಮಟ್ಟದ ತಾಂತ್ರಿಕ ಮೇಳಗಳಲ್ಲಿ ಜಿಟಿಟಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದೆ ಎಂದರು.

ಉಪನ್ಯಾಸಕರಾದ ಗಿರಿಧರ್ ಮತ್ತು ಹೇಮಂತ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.