ADVERTISEMENT

ಇಂದಿನಿಂದ ನೊಣವಿನಕೆರೆ ಕಾಡಸಿದ್ಧೇಶ್ವರ ಮಠದ ಜಾತ್ರೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 19:35 IST
Last Updated 3 ಮಾರ್ಚ್ 2024, 19:35 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ತಿಪಟೂರು: ತಾಲ್ಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಮಾರ್ಚ್‌ 4ರಿಂದ 6ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಡಾ. ಕರಿವೃಷಭದೇಶಿಕೆಂದ್ರ ಶಿವಯೋಗಿಶ್ವರ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

4ರಂದು ಬೆಳಿಗ್ಗೆ 8ಕ್ಕೆ ತೆವಡೀಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.

ADVERTISEMENT

5ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ಜನಪದ ಗಾಯಕ ಶಿವರ ಉಮೇಶ್, ತಂಡದಿಂದ ಜನಪದ ಝೆಂಕಾರ, ಜಗನ್ಮಾತೆ ನೃತ್ಯ ರೂಪಕ, ಎಂಎಸ್ ಶಾಂತಲಾ ತಂಡದವರಿಂದ ‘ಪುಣ್ಯಕೋಟಿ ಗೋವಿನ ಕಥೆ’ ಪ್ರಸ್ತುತಿ ಇರಲಿದೆ. ಪದ್ಮಶ್ರೀ ಪುರಸ್ಕೃತರು ಹರೇಕಳ ಹಾಜಬ್ಬ ಭಾಗವಹಿಸಲಿದ್ದು, ಸಂಜೆ ರಥೋತ್ಸವ ಜರುಗಲಿದೆ.

4 ಹಾಗೂ 5ರಂದು ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. 6ರಂದು ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಇರಲಿದೆ. 11 ಗಂಟೆಗೆ ಧಾರ್ಮಿಕ ಸಮಾರಂಭ ನಡೆಯಲಿದ್ದು, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಉದ್ಘಾಟಿಸಲಿದ್ದಾರೆ.

ಸಮಾರಂಭದಲ್ಲಿ ಸೋಮಣ್ಣ, ಸಚಿವ ಚೆಲುವರಾಯಸ್ವಾಮಿ, ರಾಮಲಿಂಗರೆಡ್ಡಿ, ಡಿ.ಸುಧಾಕರ್, ರಾಜೇಗೌಡ, ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.