ADVERTISEMENT

ಬಸವಣ್ಣ ಪಠ್ಯ ಬದಲಾವಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 5:45 IST
Last Updated 9 ಜುಲೈ 2024, 5:45 IST

ತುಮಕೂರು: 9ನೇ ತರಗತಿ ಸಮಾಜ ವಿಜ್ಞಾನ ಮಠ್ಯದಲ್ಲಿನ ಬಸವಣ್ಣ ಅವರಿಗೆ ಸಂಬಂಧಿಸಿದ ಪಠ್ಯದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಒತ್ತಾಯಿಸಿದೆ.

9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ‘ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ’ ಶೀರ್ಷಿಕೆ ಅಡಿಯಲ್ಲಿ ಬಸವಣ್ಣ ಬಗ್ಗೆ ಅಳವಡಿಸಿರುವ ವಿಷಯ ಅತ್ಯಂತ ಸೂಕ್ತವಾಗಿದೆ. ವಾಸ್ತವ ಸಂಗತಿಗಳಿಂದ ಕೂಡಿದೆ. ಈ ಪರಿಷ್ಕೃತ ಪಠ್ಯದ ವಿಷಯವಾಗಿ ತೆಗೆದುಕೊಂಡ ನಿರ್ಣಯವನ್ನು ಜಾಗತಿಕ ಲಿಂಗಾಯತ ಮಹಾಸಭಾ ಸ್ವಾಗತಿಸುತ್ತದೆ ಎಂದು ಮಹಾಸಭಾ ಅಧ್ಯಕ್ಷ ಜಿ.ಬಿ.ನಾಗಭೂಷಣ ತಿಳಿಸಿದ್ದಾರೆ.

ಪಠ್ಯದಲ್ಲಿ ವೀರಶೈವ ಪದ ಬಿಟ್ಟಿರುವುದು ಸ್ವಾಗತಾರ್ಹ. ಆದರೆ ವೀರಶೈವ ಶಿವಾಚಾರ್ಯ ಸಂಸ್ಥೆ ಹಾಗೂ ಕೆಲವು ರಾಜಕಾರಣಿಗಳು ವೀರಶೈವ ಪದವನ್ನು ಕೈ ಬಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನು ಖಂಡಿಸುತ್ತೇವೆ. ಪರಿಷ್ಕೃತ ಪಠ್ಯ ಪುಸ್ತಕದಲ್ಲಿರುವ ವಿಷಯವು ಯಾವುದೇ ಲೋಪದೋಷ ಇಲ್ಲದ ಕಾರಣ, ಆಕ್ಷೇಪಣೆಗೆ ಒಳಗಾಗಿ ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ADVERTISEMENT

ಒಂದು ವೇಳೆ ಪಠ್ಯದಲ್ಲಿ ಬದಲಾವಣೆ ಬಯಸಿದರೆ ಅದು ಇತಿಹಾಸ ಹಾಗೂ ಬಸವ ತತ್ವಗಳಿಗೆ ವಿರೋಧವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.