ಕೊಡಿಗೇನಹಳ್ಳಿ: ಪಟ್ಟಣ ಹಾಗೂ ಹೋಬಳಿಯಲ್ಲಿನ ಹಲವು ಗ್ರಾಮಗಳ ಭಕ್ತರು ಶುಕ್ರವಾರ ಸಂಜೆ ಕೊಡಿಗೇನಹಳ್ಳಿಯ ಕೊಲ್ಲಾಪುರಮ್ಮ ದೇವಸ್ಥಾನದಲ್ಲಿ ದೇವಿಗೆ ಪೂಜೆ ಸಲ್ಲಿಸಿ ತಿರುಪತಿಗೆ ಪಾದಯಾತ್ರೆ ಹೊರಟರು.
ಏಳು ದಿನ ಪಾದಯಾತ್ರೆ ನಡೆಯಲಿದೆ. ಕೊಡಿಗೇನಹಳ್ಳಿ, ತೆರಿಯೂರು, ಚಿಕ್ಕದಾಳವಟ್ಟ, ಕುರುಕೇನಹಳ್ಳಿ, ಕಲಿದೇವಪುರ, ಆಂಧ್ರದ ಹಿಂದೂಪುರ ಹಾಗೂ ಸುತ್ತಲಿನ 450 ಜನರು ಭಾಗವಹಿಸಲಿದ್ದಾರೆ. ಹಿಂದೂಪುರ, ಲೇಪಾಕ್ಷಿ, ಬಾಗೇಪಲ್ಲಿ, ಬಿ.ಕೊತ್ತಕೋಟೆ, ಮದನಪಲ್ಲಿ, ಬಕರಾಪೇಟ, ವಾಯಲ್‌ಪಾಡು ಮಾರ್ಗವಾಗಿ ತಿರುಪತಿ ತಲುಪಲಿದ್ದಾರೆ. ನಂತರ ಏಳು ಬೆಟ್ಟಗಳನ್ನು ಹತ್ತುವ ಮೂಲಕ ತಿರುಮಲ ದೇವಸ್ಥಾನದಲ್ಲಿ ವಿಶೇಷ ತಂಡವಾಗಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲಿದ್ದಾರೆ.
ಪ್ರೂಟ್ ಕೃಷ್ಣ, ಬೇಲ್ದಾರ್ ಮಂಜು, ಪ್ರಭಾಕರ್ ರೆಡ್ಡಿ, ಮೂರ್ತಿ, ನಾಗೇಶ್, ಹರೀಶ್, ಶೀನ, ಮಂಜುನಾಥ್, ರಿಜ್ವಾನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.