ADVERTISEMENT

ಕಾರ್ತಿಕ ಹುಣ್ಣಿಮೆ; ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 5:43 IST
Last Updated 16 ನವೆಂಬರ್ 2024, 5:43 IST
ಪಾವಗಡ ತಾಲ್ಲೂಕು ನಲಿಗಾನಹಳ್ಳಿ ಬಳಿಯ ಸಂಕಾಪುರ ಸುವರ್ಚಲಾ ಆಂಜನೇಯ ದೇಗುಲದಲ್ಲಿ ಶುಕ್ರವಾರ ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಹೋಮ ನಡೆಯಿತು
ಪಾವಗಡ ತಾಲ್ಲೂಕು ನಲಿಗಾನಹಳ್ಳಿ ಬಳಿಯ ಸಂಕಾಪುರ ಸುವರ್ಚಲಾ ಆಂಜನೇಯ ದೇಗುಲದಲ್ಲಿ ಶುಕ್ರವಾರ ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಹೋಮ ನಡೆಯಿತು    

ಪಾವಗಡ: ತಾಲ್ಲೂಕಿನ ನಲಿಗಾನಹಳ್ಳಿ ಸಂಕಾಪುರ ಸುವರ್ಚಲಾ ಆಂಜನೇಯ ದೇಗುಲದಲ್ಲಿ ಶುಕ್ರವಾರ ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಹೋಮ, ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ ಏಕದಶವಾರು ರುದ್ರಾಭಿಷೇಕ, ಮನ್ಯು ಸೂಕ್ತ ಸಹಿತ ಅಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಎಲೆ ಪೂಜೆ, ವಿಶೇಷ ಅಲಂಕಾರ ನಡೆಯಿತು.

ದೇಗುಲ ಪ್ರಾಂಗಣದಲ್ಲಿ ಚಂಡಿಕಾ ಹೋಮ, ರುದ್ರ ಹೋಮ, ಧಾತ್ರಿ ಹೋಮ, ಮೃತ್ಯಂಜಯ, ದತ್ತಾತ್ರೇಯ, ಗಣಪತಿ, ಲಲಿತಾ, ನವಗ್ರಹ ಹೋಮ ನಡೆಯಿತು.

ADVERTISEMENT

ವಿವಿಧೆಡೆಯಿಂದ ಬಂದಿದ್ದ ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ದೇಗುಲ ಮುಖ್ಯಸ್ಥ ಎಂ.ಡಿ. ಅನಿಲ್ ಕುಮಾರ್, ಶ್ರೀನಾಥ್, ರಂಗನಾಥ್, ಗೋಪಿ, ಜಗದೀಶ್, ನಟರಾಜು, ಶ್ರೀನಿವಾಸ ಶರ್ಮ, ಚಂದ್ರು, ರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.