ADVERTISEMENT

ಪಾವಗಡ | ಕರ್ನಾಟಕ ರಥಯಾತ್ರೆಗೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 14:49 IST
Last Updated 22 ಜುಲೈ 2024, 14:49 IST
ಪಾವಗಡ ತಾಲ್ಲೂಕು ಅರಸೀಕೆರೆಯಲ್ಲಿ ಸೋಮವಾರ ಕನ್ನಡ  ರಥಯಾತ್ರೆಗೆ ಅದ್ದೂರಿ ಸ್ವಾಗತ ನೀಡಲಾಯಿತು. ತಹಶೀಲ್ದಾರ್ ವರದರಾಜು,  ಇಒ ಜಾನಕಿರಾಂ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾನರಸಿಂಹಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ನಾಗರಾಜು. ಪಿಡಿಒ ಸಂತೋಷ್ ಸಿಂಗ್ ಇದ್ದರು
ಪಾವಗಡ ತಾಲ್ಲೂಕು ಅರಸೀಕೆರೆಯಲ್ಲಿ ಸೋಮವಾರ ಕನ್ನಡ  ರಥಯಾತ್ರೆಗೆ ಅದ್ದೂರಿ ಸ್ವಾಗತ ನೀಡಲಾಯಿತು. ತಹಶೀಲ್ದಾರ್ ವರದರಾಜು,  ಇಒ ಜಾನಕಿರಾಂ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾನರಸಿಂಹಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ನಾಗರಾಜು. ಪಿಡಿಒ ಸಂತೋಷ್ ಸಿಂಗ್ ಇದ್ದರು   

ಪಾವಗಡ: ಕರ್ನಾಟಕ ಸಂಭ್ರಮ-50 ಅಂಗವಾಗಿ ಶಿರಾ ತಾಲ್ಲೂಕಿನಿಂದ ಅರಸೀಕೆರೆ ಗ್ರಾಮಕ್ಕೆ ಸೋಮವಾರ ಆಗಮಿಸಿದ ಕನ್ನಡ ರಥಯಾತ್ರೆಗೆ ಅದ್ದೂರಿ ಸ್ವಾಗತ ಕೋರಲಾಯಿತು.

ತಹಶೀಲ್ದಾರ್ ವರದರಾಜು, ಇಒ ಜಾನಕಿರಾಂ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾನರಸಿಂಹಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ನಾಗರಾಜು. ಪಿಡಿಒ ಸಂತೋಷ್ ಸಿಂಗ್ ಕನ್ನಡ ರಥವನ್ನು ಬರಮಾಡಿಕೊಂಡರು.

ವಿದ್ಯಾರ್ಥಿಗಳು ಪೂರ್ಣಕುಂಭ ಕಳಶ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪುರ ಮೆರವಣಿಗೆ ನಡೆಸಲಾಯಿತು.

ADVERTISEMENT

ನಂತರ ಅರಸೀಕೆರೆಯಿಂದ ಸಿ.ಕೆ ಪುರ ಮಾರ್ಗವಾಗಿ ಪಟ್ಟಣಕ್ಕೆ ರಥಯಾತ್ರೆ ಆರಂಭಿಸಿತು. ಪಟ್ಟಣದ ಶಿರಾ ರಸ್ತೆಯಲ್ಲಿ ಪಟ್ಟಣದ ವಿವಿಧ ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿ ವೃಂದ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಲಾತಂಡಗಳು, ವಾದ್ಯ ವೃಂದದೊಂದಿಗೆ ರಥವನ್ನು ಬರಮಾಡಿಕೊಂಡರು.

ಎಸ್.ಐ ತಾರಸಿಂಗ್, ಪ್ರಭಾರ ಮುಖ್ಯಶಿಕ್ಷಕ ರೇಣುಕಾರಾಜ್, ಮುಖ್ಯಶಿಕ್ಷಕ ಸಿದ್ದೇಶ್, ಶಿಕ್ಷಕರಾದ ಮಂಜುನಾಥ, ಎಸ್.ಡಿ.ಎಂ.ಸಿ ಅಧ್ಯಕ್ಷ ಗುರುರಾಜು, ಹೊ.ಮ.ನಾಗರಾಜು, ನಿಂಗಪ್ಪ, ಎಂ.ಗಂಗಾಧರಯ್ಯ, ಲೋಕೇಶ್ ಪಾಳೆಗಾರ, ಗ್ರಾಮ ಪಂಚಾಯಿತಿ ಸದಸ್ಯರಾದ ರಂಗನಾಥ, ಶಿವಕುಮಾರ್, ಮಂಜುಳ ಸೇರಿದಂತೆ, ಅಂಗನವಾಡಿ ಕಾರ್ಯಕರ್ತರು, ಎಲ್ಲ ಶಾಲಾ ಶಿಕ್ಷಕರು, ಕನ್ನಡ ಪರ ಸಂಘನೆಗಳ ಸದಸ್ಯರು, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.