ADVERTISEMENT

ಸಂಕಾಪುರ: ಸುವರ್ಚಲಾ ಆಂಜನೇಯ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 29 ಮೇ 2024, 14:08 IST
Last Updated 29 ಮೇ 2024, 14:08 IST
ಪಾವಗಡ ತಾಲ್ಲೂಕು ಸಂಕಾಪುರದಲ್ಲಿ ಬುಧವಾರ ಸುವರ್ಚಲಾ ಆಂಜನೇಯಸ್ವಾಮಿ ಮೂಲ ವಿಗ್ರಕ್ಕೆ ಜಾತ್ರಾ ಮಹೋತ್ಸವದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು.
ಪಾವಗಡ ತಾಲ್ಲೂಕು ಸಂಕಾಪುರದಲ್ಲಿ ಬುಧವಾರ ಸುವರ್ಚಲಾ ಆಂಜನೇಯಸ್ವಾಮಿ ಮೂಲ ವಿಗ್ರಕ್ಕೆ ಜಾತ್ರಾ ಮಹೋತ್ಸವದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು.   

ಪಾವಗಡ: ತಾಲ್ಲೂಕಿನ ನಲಿಗಾನಹಳ್ಳಿ ಬಳಿಯ ಸಂಕಾಪುರದಲ್ಲಿ ಜೂನ್ 1ರಂದು ಮಧ್ಯಾಹ್ನ 12ಕ್ಕೆ ಸುವರ್ಚಲಾ ಆಂಜನೇಯ ರಥೋತ್ಸವ ನಡೆಯಲಿದೆ ಎಂದು ದೇಗುಲ ಮುಖ್ಯಸ್ಥ ಎಂ.ಡಿ. ಅನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾತ್ರೆ ಪ್ರಯುಕ್ತ ಮೇ 30ಕ್ಕೆ ಕಳಶಪೂಜೆ, ಗಣಪತಿ, ನವಗ್ರಹ ಪೂಜೆ, ದೀಕ್ಷಾ ಹೋಮ, ಗಣಪತಿ ಹೋಮ, ಪವಮಾನ ಹೋಮ, ದತ್ತಾತ್ರೇಯ ಹೋಮ, ಮೂಲ ಮಂತ್ರ ಜಪ, ಏಕಾದಶ ರುದ್ರಾಭಿಷೇಕ, ಎಲೆ ಪೂಜೆ, ಅಲಂಕಾರ ನಡೆಯಲಿದೆ.

31ರಂದು ಲಲಿತಾ ಸಹಸ್ರನಾಮ ಹೋಮ, ದುರ್ಗಾ ಹೋಮ, ಲಲಿತಾ ಸಹಸ್ರನಾಮ ಕುಂಕುಮಾರ್ಚನೆ, ಸುವರ್ಚಲಾ ದೇವಿ ಅಷ್ಟೋತ್ತರ, ಶಾರದಾಂಬೆ ಅಷ್ಟೋತ್ತರ ನಡೆಯಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.