ADVERTISEMENT

ಮುಗುದಾಳ ಬೆಟ್ಟ: ನೀರು ಪೋಲಿಗೆ ತಡೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 14:15 IST
Last Updated 14 ನವೆಂಬರ್ 2024, 14:15 IST
ಪಾವಗಡ ತಾಲ್ಲೂಕು ಮುಗದಾಳಬೆಟ್ಟ ಬಳಿಯ ಹೊಸಕೆರೆ ಕಟ್ಟೆ ಬಳಿ ಮಂಗೆ ಬಿದ್ದ ಸ್ಥಳಕ್ಕೆ ಮರಳಿನ ಚೀಲ ಹಾಕಲಾಗಿದೆ
ಪಾವಗಡ ತಾಲ್ಲೂಕು ಮುಗದಾಳಬೆಟ್ಟ ಬಳಿಯ ಹೊಸಕೆರೆ ಕಟ್ಟೆ ಬಳಿ ಮಂಗೆ ಬಿದ್ದ ಸ್ಥಳಕ್ಕೆ ಮರಳಿನ ಚೀಲ ಹಾಕಲಾಗಿದೆ   

ಪಾವಗಡ: ತಾಲ್ಲೂಕಿನ ನಿಡಗಲ್ಲು ಹೋಬಳಿ ಮುಗದಾಳಬೆಟ್ಟ ಗ್ರಾಮದ ಬಳಿಯ ಹೊಸಕರೆ ಕಟ್ಟೆ ಬಳಿ ಮಂಗೆ ಬಿದ್ದು ಪೋಲಾಗುತ್ತಿದ್ದ ನೀರನ್ನು ಸಾರ್ವಜನಿಕರು, ಅಧಿಕಾರಿಗಳು ತಡೆದಿದ್ದಾರೆ.

ಕೆರೆ ಕಟ್ಟೆ ಬಳಿ ಬುಧವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಮಂಗೆ ಬಿದ್ದು ನೀರು ಪೋಲಾಗುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ತಹಶೀಲ್ದಾರ್ ವರದರಾಜು ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಗ್ರಾಮಸ್ಥರ ಸಹಕಾರದೊಂದಿಗೆ ರಾತ್ರಿಯವರೆಗೆ ಮರಳಿನ ಚೀಲಗಳನ್ನು ಹಾಕಿಸಿ ನೀರು ಪೋಲಾಗುವುದನ್ನು ತಡೆದಿದ್ದಾರೆ.

ADVERTISEMENT

ಕಾರ್ಯಾಚರಣೆ ವಿಳಂಬ ಮಾಡಿದ್ದಾರೆ ಕೆರೆ ನೀರು ಸಂಪೂರ್ಣವಾಗಿ ಹೊರ ಹರಿದು ವ್ಯರ್ಥವಾಗುತ್ತಿತ್ತು. ಮುಂದಿನ ದಿನಗಳಲ್ಲಿ ಕೆರೆ ಕಟ್ಟೆ ದುರಸ್ತಿ ಮಾಡಿಸಿ ಅನಾಹುತ ಸಮಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.