ADVERTISEMENT

ಹುಳಿಯಾರು: ಮೂಲೆ ಸೇರಿದ ಆಂಬುಲೆನ್ಸ್‌ ವಾಹನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 14:12 IST
Last Updated 25 ನವೆಂಬರ್ 2024, 14:12 IST
ಹಂದನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ವಾಹನ ಸೇವೆಗೆ ಲಭ್ಯವಾಗದೆ ಮೂಲೆ ಸೇರಿರುವುದು
ಹಂದನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ವಾಹನ ಸೇವೆಗೆ ಲಭ್ಯವಾಗದೆ ಮೂಲೆ ಸೇರಿರುವುದು    

ಹುಳಿಯಾರು: ಹಂದನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕಳೆದ ಒಂದೂವರೆ ತಿಂಗಳಿಂದ ವಾಹನದ ಟೈರ್‌ ಇಲ್ಲದೆ ಮೂಲೆ ಸೇರಿದೆ. ಇದರ ಜತೆ ರಿಪೇರಿ ಇದ್ದು ಚಾಲನೆಗೆ ಸಿದ್ಧವಾಗಿಲ್ಲ. ಹಂದನಕೆರೆ ಹೋಬಳಿ ಕೇಂದ್ರವಾಗಿದ್ದು ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ವಾಹನವಿಲ್ಲದೆ ಪರದಾಡಬೇಕಾಗಿದೆ. ಈಗಾಗಲೇ ವಾಹನ ಕೆಟ್ಟು ನಿಂತಿರುವ ಬಗ್ಗೆ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಡಿಎಸ್‌ಎಸ್‌ ಸಂಚಾಲಕ ಸಬ್ಬೇನಹಳ್ಳಿ ವಸಂತ್‌ ಆಗ್ರಹಿಸಿದ್ದಾರೆ. ಸಂಬಂಧಪಟ್ಟ ಮೇಲಧಿಕಾರಿಗಳು ಇತ್ತ ಗಮನ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು.

ಆಂಬುಲೆನ್ಸ್‌ ರಿಪೇರಿ ಜವಾಬ್ದಾರಿ ಹೊತ್ತಿರುವ ಕಂಪನಿ ನಿರ್ವಹಿಸಬೇಕಿದೆ. ಈಗಾಗಲೇ ಸಂಬಂಧಪಟ್ಟ ಕಂಪನಿ ಗಮನಕ್ಕೆ ತರಲಾಗಿದೆ. ಇನ್ನೊಂದು ವಾರದಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಯಶವಂತ್‌ ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.