ADVERTISEMENT

ಮೂಡಲ್ ಕುಣಿಗಲ್ ಕೆರೆ ನೋಡಲು ಜನರ ದಂಡು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 14:26 IST
Last Updated 6 ಅಕ್ಟೋಬರ್ 2024, 14:26 IST
ಕುಣಿಗಲ್ ದೊಡ್ಡಕೆರೆ ಕೋಡಿಯಾಗಿದ್ದು, ಸಾವಿರಾರು ಜನ ಭೇಟಿ ನೀಡಿ ವೀಕ್ಷಣೆ ಮಾಡಿದರು
ಕುಣಿಗಲ್ ದೊಡ್ಡಕೆರೆ ಕೋಡಿಯಾಗಿದ್ದು, ಸಾವಿರಾರು ಜನ ಭೇಟಿ ನೀಡಿ ವೀಕ್ಷಣೆ ಮಾಡಿದರು   

ಕುಣಿಗಲ್: ಇತಿಹಾಸ ಪ್ರಸಿದ್ಧ ಮೂಡಲ್ ಕುಣಿಗಲ್ ದೊಡ್ಡ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಭಾನುವಾರ ಸಾವಿರಾರು ಜನರು ಕೋಡಿ ಪ್ರದೇಶಕ್ಕೆ ಭೇಟಿ ನೀಡಿ ನೀರಿನಲ್ಲಿ ಮಿಂದು ಸಂಭ್ರಮಿಸಿದರು.

ಮಳೆ ನೀರಿನ ಜತೆಗೆ ಹೇಮಾವತಿ ನೀರು ಸೇರಿರುವುದರಿಂದ ದೊಡ್ಡಕೆರೆ ಮಂಗಳವಾರ ಕೋಡಿಯಾಗಿದ್ದರೂ, ಶುಕ್ರವಾರದಿಂದ ನೀರಿನ ಹರಿವು ಹೆಚ್ಚಾಗಿದೆ. ನೀರಿನ ರಭಸ ಹೆಚ್ಚಾಗಿದ್ದು, ಜಲಪಾತದ ಮಾದರಿಯಲ್ಲಿ ಧುಮ್ಮಕುತ್ತಿರುವುದು ಜನರ ಗಮನ ಸೆಳೆಯುತ್ತಿದೆ.

ಕೋಡಿ ಪ್ರದೇಶಕ್ಕೆ ಸಾವಿರಾರು ಜನರು ವಾಹನಗಳಲ್ಲಿ ಬಂದು ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಭೇಟಿ ನೀಡುತ್ತಿರುವುದರಿಂದ ತುಮಕೂರು- ಕುಣಿಗಲ್ ರಸ್ತೆ ಸಂಚಾರ ವ್ಯತ್ಯಯವಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪೊಲೀಸರು ಗಮನಹರಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.