ತುಮಕೂರು: ನಿಷೇಧಿಸಿರುವ ಕೀಟನಾಶಕ ಉತ್ಪಾದಿಸಿ, ಮಾರಾಟ ಮಾಡುತ್ತಿದ್ದ ತಾಲ್ಲೂಕಿನ ಹೆಬ್ಬೂರು ಲಕ್ಷ್ಮಿವೆಂಕಟೇಶ್ವರ ಆಗ್ರೋಟೆಕ್ ಮಳಿಗೆ ಮೇಲೆ ದಾಳಿ ನಡೆಸಿದ ಕೃಷಿ ಇಲಾಖೆ ಅಧಿಕಾರಿಗಳು ಕೀಟನಾಶಕ ಜಪ್ತಿ ಮಾಡಿದ್ದಾರೆ.
ತರಕಾರಿ ಹಾಗೂ ಹಣ್ಣಿನ ಬೆಳೆಗಳಿಗೆ ನ್ಯೂ ಪ್ಯಾಕ್ ಆಗೋ ಕೆಮ್ ಕಂಪನಿಯ ಡೈಮಿಥೋಯೇಟ್ (ರೋಗಾರ್) ಎಂಬ ಕೀಟನಾಶಕ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ ಕೀಟನಾಶಕದ ಡಬ್ಬಿಯ ಮೇಲೆ ‘ರೋಗಾರ್’ ಹೆಸರಿನ ಲೇಬಲ್ ಅಂಟಿಸಿ ಮಾರಾಟ ಮಾಡುವುದು ಪತ್ತೆಯಾಗಿದೆ.
₹7,286 ಮೌಲ್ಯದ 10.2 ಲೀಟರ್ ಕೀಟನಾಶಕ ಜಪ್ತಿ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ (ಜಾರಿದಳ) ಪುಟ್ಟರಂಗಪ್ಪ ತಿಳಿಸಿದ್ದಾರೆ.
ಈ ಹಿಂದೆ ಪರಿಶೀಲನೆ ಸಮಯದಲ್ಲಿ ನಿಷೇಧಿತ ಕೀಟನಾಶಕ ದಾಸ್ತಾನು ಮಾಡಿರುವುದು ಕಂಡು ಬಂದಿತ್ತು. ಈ ಸಂಬಂಧ ನೋಟಿಸ್ ನೀಡಿದ್ದರೂ ಅಗತ್ಯ ಮಾಹಿತಿ ಒದಗಿಸಿರಲಿಲ್ಲ. ಈಗ ದಾಳಿ ನಡೆಸಿ ಜಪ್ತಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.