ADVERTISEMENT

ಶಿವಕುಮಾರ ಶ್ರೀ‌ ಪುಣ್ಯಾರಾಧನೆ: ಪ್ರಧಾನಿಗೆ ಆಹ್ವಾನ ‌ನೀಡಿದ ಸಿದ್ಧಗಂಗಾ ಶ್ರೀ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 8:59 IST
Last Updated 28 ನವೆಂಬರ್ 2019, 8:59 IST
ನವದೆಹಲಿಯ ಸಂಸತ್ ಭವನದ ಆವರಣದಲ್ಲಿ ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ.
ನವದೆಹಲಿಯ ಸಂಸತ್ ಭವನದ ಆವರಣದಲ್ಲಿ ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ.   

ನವದೆಹಲಿ: ಲಿಂಗೈಕ್ಯ ಶಿವಕುಮಾರ‌‌ ಸ್ವಾಮೀಜಿ ಅವರ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಹ್ವಾನ ನೀಡಿದರು.

ಸಂಸತ್ ಭವನದ ಪ್ರಧಾನಿ ಕಚೇರಿಯಲ್ಲಿ ಮೋದಿ ಅವರನ್ನು ಭೇಟಿ ಮಾಡಿದ‌‌ ಶ್ರೀಗಳು, ಜನವರಿ 21ರಂದು ನಡೆಯಲಿರುವ ಶಿವಕುಮಾರ ಶ್ರೀಗಳ ಮೊದಲ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೋರಿದರು.

‘ಪುಣ್ಯಾರಾಧನೆ ಸಂದರ್ಭ ಗಣರಾಜ್ಯೋತ್ಸವ ಕಾರ್ಯಕ್ರಮ‌ ಇರುವುದರಿಂದ ಸಿದ್ಧಗಂಗೆಗೆ ಬರುವುದು ಸಾಧ್ಯವಾಗಲಿಕ್ಕಿಲ್ಲ. ಆದರೂ ಬರಲು ಪ್ರಯತ್ನಿಸುವೆ’ಎಂದು ಪ್ರಧಾನಿ ಹೇಳಿದ್ದಾರೆ.

ADVERTISEMENT

ಕಾರ್ಯಕ್ರಮಕ್ಕೆ‌ ಮೊದಲೇ ಮಠಕ್ಕೆ ಭೇಟಿ ನೀಡಿ ತೆರಳುವಂತೆಯೂ ಕೋರಲಾಗಿದೆ ಎಂದು ಭೇಟಿಯ ನಂತರ ಶ್ರೀಗಳು ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.