ADVERTISEMENT

ಕುಣಿಗಲ್ | ಪೋಕ್ಸೊ ಪ್ರಕರಣ: ಗುಜರಾತಿನಲ್ಲಿ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 14:21 IST
Last Updated 20 ಅಕ್ಟೋಬರ್ 2024, 14:21 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಕುಣಿಗಲ್: ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪಿಯನ್ನು ಕುಣಿಗಲ್ ಪೊಲೀಸರು ಗುಜರಾತಿನಲ್ಲಿ ಬಂಧಿಸಿ ಪಟ್ಟಣಕ್ಕೆ ಕರೆತಂದಿದ್ದಾರೆ.

ADVERTISEMENT

ಬಿಹಾರದ ಅನುಕುಮಾರ್ ಅಲಿಯಾಸ್ ಶರವಣಕುಮಾರ್ ಬಂಧಿತ ಆರೋಪಿ.

ಪಟ್ಟಣದಲ್ಲಿ ಕೂಲಿಕಾರ್ಮಿಕನಾಗಿದ್ದ ಆರೋಪಿ ಬಾಲಕಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಗುಜರಾತಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ.

ಬಾಲಕಿ ಕಾಣೆಯಾದ ಬಗ್ಗೆ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಕುಣಿಗಲ್ ಪೊಲೀಸರು, ಇಬ್ಬರೂ ಗುಜರಾತಿನಲ್ಲಿರುವ ಖಚಿತ ಮಾಹಿತಿ ಮೇರೆಗೆ ತೆರಳಿ ಬಂಧಿಸಿದ್ದಾರೆ.

ಸಿಪಿಐ ನವೀನ್ ಗೌಡ, ಸಿಬ್ಬಂದಿ ನಟರಾಜು, ಈಶ್ವರ್ ಪ್ರಸಾದ ಮತ್ತು ಕಾವ್ಯಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.