ತುಮಕೂರು: ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದರೆ, ಕೋಳಿ ಮಾಂಸದ ಬೆಲೆ
ಏರಿಕೆಯಾಗಿದೆ.
ಬೀನ್ಸ್ ದರ ಸ್ವಲ್ಪ ತಗ್ಗಿದೆ. ಕಳೆದ ವಾರ ಕೆ.ಜಿ.ಗೆ ₹75ರಂತೆ ಮಾರಾಟವಾಗಿದ್ದು, ಪ್ರಸ್ತುತ ₹5 ಕಡಿಮೆಯಾಗಿದೆ.
ಈ ವಾರವೂ ಟೊಮೆಟೊ ಬೆಲೆ ಕೆ.ಜಿ.ಗೆ ₹ 40 ಇದೆ. ಮೈಸೂರು ಭಾಗದಿಂದ ತರಕಾರಿ ಆವಕ ಕಡಿಮೆಯಾಗಿದ್ದು, ಸ್ಥಳೀಯ ಮಾರುಕಟ್ಟೆಗೆ ಹೊರಗಿನಿಂದ ತರಕಾರಿ ಬರುತ್ತಿಲ್ಲ. ಜಿಲ್ಲೆಯಲ್ಲಿ ಬೆಳೆದ ತರಕಾರಿಗಳಷ್ಟೇಮಾರುಕಟ್ಟೆಗೆ ಸರಬರಾಜಾಗುತ್ತಿವೆ. ನುಗ್ಗೆಕಾಯಿ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಕ್ಯಾಪ್ಸಿಕಂ ಬೆಲೆ ಕೆ.ಜಿ.ಗೆ ₹40ಕ್ಕೆಇಳಿದಿದೆ.
ಇದೀಗ ಸೀತಾಫಲ ಮಾರುಕಟ್ಟೆಗೆ ಬಂದಿದ್ದರೂ, ಗುಣಮಟ್ಟದ ಹಣ್ಣು ಸಿಗುತ್ತಿಲ್ಲ. ಸೀಬೆಹಣ್ಣು ಕೆ.ಜಿ.ಗೆ
₹60, ಸೇಬು ₹80– 160ರವರೆಗೆ ಬೆಲೆ ಇದೆ. ಏಲಕ್ಕಿಬಾಳೆ ಹಣ್ಣಿನ ಬೆಲೆ₹60ರಲ್ಲೇ ಮುಂದುವರೆದಿದೆ.
ಬೇಳೆ ಕಾಳು ಸ್ಥಿರ: ನಗರದ ಮಂಡಿಪೇಟೆಯಲ್ಲಿ ಬೇಳೆ ಕಾಳುಗಳ ಬೆಲೆ ಸ್ಥಿರವಾಗಿದೆ. ಕಳೆದ ಕೆಲವು ವಾರಗಳಿಂದ ದಿನಸಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ.
ಕೋಳಿ ಬೆಲೆ ಹೆಚ್ಚಳ: ಕೋಳಿ ಮಾಂಸದ ಬೆಲೆ ಹೆಚ್ಚಾಗಿದ್ದು, ಕಳೆದ ವಾರ ಕೆ.ಜಿ.ಗೆ ₹180ಕ್ಕೆ ಮಾರಾಟವಾಗಿದ್ದು, ಈ ವಾರ ₹240ಕ್ಕೆ ಹೆಚ್ಚಾಗಿದೆ.
ಮೀನು ಬೆಲೆ ಕಡಿಮೆ: ನಗರದ ಮತ್ಯ್ಸದರ್ಶಿನಿಯಲ್ಲಿ ಮೀನಿನ ಬೆಲೆ ಸ್ವಲ್ಪ ಕಡಿಮೆಯಾಗುತ್ತಿದೆ. ಸೆಪ್ಟೆಂಬರ್ 2ನೇ ವಾರದಲ್ಲಿ ಇನ್ನೂ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಮತ್ಯ್ಸದರ್ಶಿನಿ ಮಾಲೀಕ ಸಿದ್ದರಾಮಯ್ಯ. ಬಂಗುಡೆ ಕಳೆದ ವಾರ ಕೆ.ಜಿ.ಗೆ ₹260 ಇತ್ತು. ಈ ವಾರ ₹30 ಕಡಿಮೆಯಾಗಿ ₹230ಕ್ಕೆ ಮಾರಾಟವಾಗುತ್ತಿದೆ.
ಬಿಳಿ ಮಾಂಜಿ ₹740,ಬೂತಾಯಿ ₹200, ಅಂಜಲ್ ₹580, ಏಡಿ ಕೆ.ಜಿ.ಗೆ ₹310ಕ್ಕೆ ಮಾರಾಟವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.