ಶಿರಾ: ನಗರದ ಖಾಸಗಿ ಬಸ್ ನಿಲ್ದಾಣ ಮಳೆಯಿಂದಾಗಿ ಕೆಸರು ಗದ್ದೆಯಾಗಿದ್ದು ಪ್ರಯಾಣಿಕರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬಸ್ ನಿಲ್ದಾಣ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಈಗ ಮಳೆಯಿಂದ ನಿಲ್ದಾಣದಲ್ಲಿ ಸಂಚರಿಸುವುದು ಸಹ ಕಷ್ಟವಾಗಿದೆ.
ನಿಲ್ದಾಣ ಗುಂಡಿಗಳಿಂದ ಕೂಡಿದ್ದು ಮಳೆ ಬಂದ ಕಾರಣ ಗುಂಡಿಗಳಲ್ಲಿ ನೀರು ನಿಂತು ಕೆಸರುಮಯವಾಗಿದೆ. ವೇಗವಾಗಿ ದ್ವಿಚಕ್ರ ವಾಹನ ಹಾಗೂ ಆಟೊ ಬಂದಾಗ ಕೆಸರು ಓಡಾಡುವವರಿಗೆ ಸಿಡಿದು ಜಗಳವಾಡುವಂತಾಗಿದೆ. ಜೊತೆಗೆ ಬಸ್ ನಿಲ್ದಾಣದಲ್ಲಿ ವ್ಯಾಪಾರ ಮಾಡುವವರಿಗೆ ತೊಂದರೆಯಾಗುತ್ತಿದೆ.
ಬಸ್ ನಿಲ್ದಾಣವನ್ನು ₹1.29 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವುದಾಗಿ ನಗರಸಭೆ ಅಧಿಕಾರಿಗಳು ಹೇಳುತ್ತಿದ್ದು ಕಾಮಗಾರಿ ಪ್ರಾರಂಭವಾಗುವುದು ಯಾವಾಗ ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.