ADVERTISEMENT

ನಗರದಲ್ಲಿ ಸಂವಿಧಾನ ಉಳಿಸಿ ಜಾಥಾ

ಸಂವಿಧಾನ ಪ್ರೀತಿ ಕಲಾ ಬಳಗ ಆರಂಭಿಸಿರುವ ರಾಜ್ಯಮಟ್ಟದ ಕಲಾ ಜಾಥ: ಸಂವಿಧಾನ ಉಳಿಸಲು ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಜಾಗೃತಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 10:28 IST
Last Updated 29 ಜನವರಿ 2019, 10:28 IST
ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಸಂವಿಧಾನ ಪ್ರೀತಿ ಬಳಗದ ಕಲಾವಿದರು ಅಭಿನಯಿಸಿದ ನಾಟಕದ ಒಂದು ದೃಶ್ಯ
ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಸಂವಿಧಾನ ಪ್ರೀತಿ ಬಳಗದ ಕಲಾವಿದರು ಅಭಿನಯಿಸಿದ ನಾಟಕದ ಒಂದು ದೃಶ್ಯ   

ತುಮಕೂರು: ಸಂವಿಧಾನ ಪ್ರೀತಿ ಕಲಾ ಬಳಗವು ಬೆಂಗಳೂರಿನಲ್ಲಿ ಆರಂಭಿಸಿದ ರಾಜ್ಯಮಟ್ಟದ ಕಲಾ ಜಾಥಾ ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಿ ಜನಜಾಗೃತಿ ಆಂದೋಲನವು ಸೋಮವಾರ ತುಮಕೂರು ನಗರಕ್ಕೆ ಆಗಮಿಸಿತು.

ಪಿಯುಸಿಎಲ್ ಕರ್ನಾಟಕ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಸಂವಿಧಾನ ಪ್ರೀತಿ ಕಲಾ ಬಳಗದಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಹಾನಗರ ಪಾಲಿಕೆ ಆವರಣದಲ್ಲಿ ಕಲಾಜಾಥವನ್ನು ಏರ್ಪಡಿಸಿ, ನಾಟಕದ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಜಿ.ಪಿ ದೇವರಾಜ್ ಉದ್ಘಾಟಿಸಿದ ಅವರು, ನಾಗರಿಕರು ಸಂವಿಧಾನದ ಬಗ್ಗೆ ಜಾಗೃತಿ ಹೊಂದಿದ್ದರೆ ಸಮಾನತೆಯ ಮಾನವ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಹಾಗಾಗಿ ಸಂವಿಧಾನದ ಆಶಯಗಳನ್ನು ಎಲ್ಲರೂ ಅಳವಡಿಸಿಕೊಂಡು ಬಲಿಷ್ಠ ರಾಷ್ಟವನ್ನು ಕಟ್ಟಬೇಕಾಗಿದೆ ಎಂದು ಹೇಳಿದರು.

ADVERTISEMENT

ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಸ್.ಜಗದೀಶ್‌ ಅವರು,ಕಲಾಬಳಗದ ಕಲಾವಿದರು ಸಂವಿಧಾನದ ಆಶಯಗಳೇನೆಂಬುದನ್ನು ಬೀದಿನಾಟಕದ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟಿದ್ದಾರೆ. ಬೀದಿನಾಟಕ ಪರಿಣಾಮಕಾರಿ ಸಾಧನವಾಗಿದೆ ಎಂದು ಹೇಳಿದರು.

ನಿವೃತ್ತ ಪ್ರಾಂಶು‍ಪಾಲ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಮಾತನಾಡಿ, ‘ದೇಶದಲ್ಲಿ ಇಂದು ಸಂವಿಧಾನವನ್ನು ಅಧ್ಯಯನ ಮಾಡಿ ಅದನ್ನು ರಕ್ಷಿಸುವ ಹಾಗೂ ಉಳಿಸುವ ಕಾರ್ಯ ಮಾಡಬೇಕಿದೆ’ ಎಂದು ಹೇಳಿದರು.

ಕಾರ್ಮಿಕ ಮುಖಂಡ ಸೈಯದ್ ಮುಜೀಬ್, ಸ್ಲಂ ಜನಾಂದೋಲನ ಸಂಚಾಲಕ ಎ.ನರಸಿಂಹಮೂರ್ತಿ, ಸಮುದಾಯ ಸಂಘಟನೆಯ ಜಿಲ್ಲಾ ಸಂಚಾಲಕ ಕೆ.ಈ.ಸಿದ್ದಯ್ಯ, ಡಾ.ಟಿ.ಆರ್.ಲೀಲಾವತಿ, ಜಿ.ಕೆ.ನಾಗರಾಜು, ಮುದ್ದಗಂಗಯ್ಯ, ಅಶ್ವಾಕ್ ಅಹಮದ್ ಹಾಗೂ ಬಿ.ಎಸ್‌.ಸೌಭಾಗ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.