ಪಾವಗಡ: ಕೊರಟಗೆರೆ ಪಟ್ಟಣದಲ್ಲಿ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ವಾಲ್ಮೀಕಿ ವಿಗ್ರಹ ತೆರವು ಗೊಳಿಸಿರುವುದನ್ನು ವಿರೋಧಿಸಿ ಸಮುದಾಯ ಜನತೆ ಶುಕ್ರವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು.
ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಪಾಳೇಗಾರ್ ಮಾತನಾಡಿ, ‘ರಾಮಾಯಣ ಗ್ರಂಥವನ್ನು ವಿಶ್ವಕ್ಕೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿ ಅವರ ವಿಗ್ರಹವನ್ನು ಕೊರಟಗೆರೆ ತಾಲ್ಲೂಕು ಆಡಳಿತ ರಾತ್ರೋ ರಾತ್ರೋ ತೆರವುಗೊಳಿಸಿರುವುದು ಖಂಡನೀಯ. ಇದು ಇಡೀ ಜನಾಂಗದವರಿಗೆ ಮಾಡಿದ ಅಪಮಾನ’ ಎಂದರು.
‘ವಾಲ್ಮೀಕಿ ಜಯಂತಿ ಹಿಂದಿನ ದಿನವೇ ಇಂತಹ ಕೃತ್ಯ ಎಸಗಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಮಹರ್ಷಿ ವಾಲ್ಮೀಕಿ ವಿಗ್ರಹ, ನಾಮಫಲಕವನ್ನು ಅದೇ ಸ್ಥಳದಲ್ಲಿ ಅಳವಡಿಸಲು ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.
ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರೇಡ್ 2 ತಹಶೀಲ್ದಾರ್ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡ ಈರಣ್ಣ, ಬೇಕರಿ ನಾಗರಾಜ್, ಲಕ್ಷ್ಮಿನಾರಾಯಣ, ಆಟೋ ಸತ್ತಿ, ನಾಗೇಂದ್ರ, ಅಶ್ವತ್ಥ, ಮದಕರಿ ನಾಯಕ, ಭಾಸ್ಕರ ನಾಯಕ, ಬೆಳ್ಳಿ ಬಟ್ಲು ಬಲರಾಮ, ಮಂಜುನಾಥ, ಅನಂತಯ್ಯ, ಬಂಗೆಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.