ADVERTISEMENT

ಪಾವಗಡ: ರಸಗೊಬ್ಬರ ಮಾರಾಟ ಮಳಿಗೆಗೆ ದಾಳಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 13:56 IST
Last Updated 26 ನವೆಂಬರ್ 2024, 13:56 IST
ಪಾವಗಡ ತಾಲ್ಲೂಕು ನಾಗಲಮಡಿಕೆ ಗ್ರಾಮದ ರಸಗೊಬ್ಬರ ಮಾರಾಟ ಮಳಿಗೆ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಳಪೆ ಗುಣಮಟ್ಟದ ಜೈವಿಕ ಪ್ರಚೋದಕಗಳನ್ನು ವಶಪಡಿಸಿಕೊಂಡಿದ್ದಾರೆ
ಪಾವಗಡ ತಾಲ್ಲೂಕು ನಾಗಲಮಡಿಕೆ ಗ್ರಾಮದ ರಸಗೊಬ್ಬರ ಮಾರಾಟ ಮಳಿಗೆ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಳಪೆ ಗುಣಮಟ್ಟದ ಜೈವಿಕ ಪ್ರಚೋದಕಗಳನ್ನು ವಶಪಡಿಸಿಕೊಂಡಿದ್ದಾರೆ   

ಪಾವಗಡ: ತಾಲ್ಲೂಕಿನ ನಾಗಲಮಡಿಕೆಯ ಗೊಬ್ಬರ ಮಾರಾಟ ಮಳಿಗೆಯಲ್ಲಿ ಹೆಚ್ಚಿನ ಮಟ್ಟದ ಕೀಟನಾಶಕ ಹೊಂದಿರುವ ಕಳಪೆ ಗುಣಮಟ್ಟದ ಸುಮಾರು 5 ಲೀಟರ್ ಜೈವಿಕ ಪ್ರಚೋದಕಗಳನ್ನು ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ.

ಆಸ್ಕರ್ ಕ್ರಾಪ್ ಕೇರ್, ಆಸ್ಕರ್ ಮಿತ್ರ, ವಾಯು ಎಂಬ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಥಯೋಮೆತಾಕ್ಸಾಮ್, ಹಿಮಾಮೆಕ್ಟಿನ್ ಬೆಂಜಾಯೇಟ್ ಅಂಶಗಳಿರುವುದು ದೃಢಪಟ್ಟಿತ್ತು.

ಜಾರಿ ದಳದ ಕೃಷಿ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ, ವೈ.ಅಶ್ವತ್ಥನಾರಾಯಣ, ಕೃಷಿ ಅಧಿಕಾರಿ ಶಂಷದ್ ಉನ್ನೀಸಾ ದಾಳಿ ನಡೆಸಿ ₹29 ಸಾವಿರ ಮೌಲ್ಯದ ಜೈವಿಕ ಪ್ರಚೋದಕಗಳನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.